* ಮಹಾರಾಷ್ಟ್ರದ 28 ವರ್ಷದ ಸ್ವಪ್ನಿಲ್ ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ ಸೊಗಸಾದ ಪ್ರದರ್ಶನವನ್ನು ನೀಡಿ ಪುರುಷರ 50 ಮೀ ರೈಫಲ್ ತ್ರಿ ಪೊಶಿಷನ್ ವಿಭಾಗದಲ್ಲಿ ಸ್ವಪ್ನಿಲ್ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.
* 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
* ಚೀನಾದ ಲಿಯು ಯುಕುನ್ 463.6 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದುಕೊಂಡರೆ, ಉಕ್ರೇನ್ ಸೆರ್ಹಿ ಕುಲಿಶ್ 461.3 ಪಾಯಿಂಟ್ಸ್ನೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಜೆಕ್ ರಿಪಬ್ಲಿಕ್ನ ಶೂಟರ್ ಜಿರಿ ಪ್ರೀವ್ರಾಟ್ಸ್ಕಿ (440.7 ಅಂಕಗಳು) ಅವರನ್ನು ಹಿಂದಿಕ್ಕಿ ಸ್ವಪ್ನಿಲ್ ಕುಸಾಲೆ ಮೂರನೇ ಸ್ಥಾನಕ್ಕೇರಿದರು. ಈ ಮೂಲಕ ಭಾರತೀಯ ಶೂಟರ್ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
* 1995 ರಲ್ಲಿ ಜನಿಸಿದ ಸ್ವಪ್ನಿಲ್ ಕುಸಾಲೆ ಅವರು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಮಹಾರಾಷ್ಟ್ರ ಸರ್ಕಾರದ ಕ್ರೀಡಾ ಪ್ರಭೋದಿನಿ ಕಾರ್ಯಕ್ರಮಕ್ಕೆ ಸೇರಿಸಿದಾಗ ಕ್ರೀಡೆಯಲ್ಲಿ ಅವರ ಪಯಣ ಪ್ರಾರಂಭವಾಯಿತು.
ಗುರುವಾರ, 01 ಆಗಸ್ಟ್ 2024
4:08 ಅಪರಾಹ್ನ
Daily PDF
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ; ಶೂಟಿಂಗ್ನಲ್ಲಿ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆ
Authored by:
Akshata Halli