* ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅಮನ್ ಸೆಹ್ರಾವತ್ ಅವರು ಪುರುಷರು 57 ಕೆಜಿ ತೂಕ ವಿಭಾಗದಲ್ಲಿ ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಸೋಲಿಸಿದರು.
* ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐದನೇ ಕಂಚು ಮತ್ತು ಆರನೇ ಒಟ್ಟಾರೆ ಪದಕವಾಗಿದೆ. ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಮೊದಲ ಪದಕ ಗೆದ್ದಿದೆ.
* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ ಸಿಕ್ಕಿದ್ದು, ಈ ಕ್ರೀಡಾಕೂಟದಲ್ಲಿ ಭಾರತಕ್ಕೆ 5 ನೇ ಕಂಚಿನ ಪದಕವಾಗಿದ್ದರೆ, ಕುಸ್ತಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.
* ಅಮನ್ ಈ ಪದಕದೊಂದಿಗೆ 2008 ರಿಂದ ಕುಸ್ತಿಯಲ್ಲಿ ಭಾರತದ ಪದಕದ ಗೆಲುವಿನ ಸರಣಿ ಮುಂದುವರೆದಿದೆ. 2008 ರಿಂದ ಇಲ್ಲಿಯವರೆಗೆ, ಭಾರತವು ಸತತ 5 ಒಲಿಂಪಿಕ್ಸ್‌ಗಳಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದೆ.
* ಭಾರತಕ್ಕೆ ಗರಿಷ್ಠ ಸಂಖ್ಯೆಯ ಪದಕ ಬಂದಿರುವುದು ಈ ಕುಸ್ತಿಯಲ್ಲಿ. ಇದುವರೆಗೆ ಭಾರತ ಕುಸ್ತಿಯಲ್ಲಿ 8 ಒಲಿಂಪಿಕ್ ಪದಕಗಳನ್ನು ಗೆದ್ದುಕೊಂಡಿದೆ. ಅಮನ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
* 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಹಾಗೂ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ಹಾಗೂ 2016 ರಲ್ಲಿ ನಡೆದಿದ್ದ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು.
* 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿ ದಹಿಯಾ ಅವರು 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, ಬಜರಂಗ್ ಪುನಿಯಾ ಕಂಚಿನ ಪದಕ ಗೆದ್ದಿದ್ದರು. ಇದೀಗ ಅಮನ್ ಈ ಟ್ರೆಂಡ್ ಅನ್ನು ಮುಂದುವರೆಸಿದ್ದಾರೆ.
ಶನಿವಾರ, 10 ಆಗಸ್ಟ್ 2024
11:00 ಪೂರ್ವಾಹ್ನ
Daily PDF
ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತಕ್ಕೆ ಆರನೇ ಪದಕ; ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಅಮನ್ ಸೆಹ್ರಾವತ್
Authored by:
Bhagya R K