* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.
* ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತು. ಟೀಂ ಇಂಡಿಯಾ ಪರ ಇಡೀ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ನಾಯಕ ಹರ್ಮನ್ಪ್ರೀತ್ ಸಿಂಗ್ 10 ಗೋಲು ಬಾರಿಸಿ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದರು. ಕಂಚಿನ ಪದಕದ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
* ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಮಣಿಸಿ ಕಂಚಿನ ಪದಕ ಗೆದ್ದಿತ್ತು.
* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ನಾಲ್ಕನೇ ಕಂಚಿನ ಪದಕ ಇದಾಗಿದ್ದು, ಟೀಮ್ ಇವೆಂಟ್‌ನಲ್ಲಿ ಗೆದ್ದ 2ನೇ ಪದಕವಾಗಿದೆ. ಈ ಗೆಲುವಿನೊಂದಿಗೆ ಭಾರತ ತಂಡ ತಂಡದ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್‌ಗೂ ಸೂಕ್ತವಾದ ವಿದಾಯವನ್ನು ಒದಗಿಸಿತು.
* ಭಾರತದ 13ನೇ ಒಲಿಂಪಿಕ್ ಪದಕ ಇದಾಗಿದೆ. 8 ಬಾರಿ ಚಿನ್ನ ಗೆದ್ದಿರುವ ಭಾರತ, 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಏಕೈಕ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡು ಬೆಳ್ಳಿ ಪದಕ ಸಂಪಾದಿಸಿತ್ತು.
* ಪಂದ್ಯಾವಳಿಯುದ್ದಕ್ಕೂ ಶ್ರೀಜೇಶ್, ಗೋಡೆಯಂತೆ ನಿಂತು ಎದುರಾಳಿಗಳ ಬೆಂಕಿ ಹೊಡೆತಗಳನ್ನು ತಡೆದು ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಶುಕ್ರವಾರ, 09 ಆಗಸ್ಟ್ 2024
10:54 ಅಪರಾಹ್ನ
Daily PDF
ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತಕ್ಕೆ 4ನೇ ಪದಕ ಹಾಕಿಯಲ್ಲಿ ಕಂಚು ಗೆದ್ದ ಭಾರತ
Authored by:
Bhagya R K