* ಭಾರತೀಯ ನೌಕಾಪಡೆಯ ಅತ್ಯಂತ ಹಳೆಯ ಲ್ಯಾಂಡಿಂಗ್ ಹಡಗು ಐಎನ್‍ಎಸ್ ಮಗರ್ ಹಡಗನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಇಲ್ಲಿನ ನೌಕಾನೆಲೆಯಲ್ಲಿ ನಡೆದ ಸೂರ್ಯಾಸ್ತದ ಸಮಾರಂಭದಲ್ಲಿ ಸಿಡಿಆರ್ ಹೇಮಂತ್ ವಿ ಸಾಲುಂಖೆ ರವರ ನೇತೃತ್ವದಲ್ಲಿ ಹಡಗನ್ನು ಸ್ಥಗಿತಗೊಳಿಸಲಾಯಿತು.
* ಐಎನ್‍ಎಸ್ ಮಗರ್ ಅನ್ನು ನವೆಂಬರ್ 16, 1984 ರಂದು ಮೀರಾ ತಹಿಲಿಯಾನಿ ರವರು ಉದ್ಘಾಟಿಸಲಾಗಿದ್ದು, ಮತ್ತು ಜುಲೈ 18, 1987 ರಂದು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‍ಯಾರ್ಡ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್‍ನಲ್ಲಿ ದಿವಂಗತ ಅಡ್ಮಿರಲ್ ಆರ್ ಎಚ್ ತಹಿಲಿಯಾನಿ ಅವರಿಂದ ಕಾರ್ಯಾರಂಭ ಮಾಡಿಸಲಾಗಿತ್ತು.
* ಸದರ್ನ್ ನೇವಲ್ ಕಮಾಂಡ್‍ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಫ್ ವೈಸ್ ಅಡ್ಮಿರಲ, 2005-06 ರ ಅವಧಿಯಲ್ಲಿ ಹಡಗಿನ ಮುಖ್ಯಸ್ಥರಾಗಿದ್ದ ಎಂಎ ಹಂಪಿಹೊಳಿ ಅವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದರು ಎಂದು ಭಾರತೀಯ ನೌಕಾಪಡೆಯು ತಿಳಿಸಿದೆ.
ಪುರಾತನ INS ಮಗರ್ ಹಡಗನ್ನು ನಿಷ್ಕ್ರೀಯಗೊಳಿಸಿದ ಭಾರತೀಯ ನೌಕಾಪಡೆ
Published by Bhagya R K
08 ಮೇ 2023