* ಪಶ್ಚಿಮ ಘಟ್ಟದ ಕೊಳವೊಂದರಲ್ಲಿ ಈಚೆಗೆ ಅಪರೂಪದ ‘ಅಣಬೆ ಕಪ್ಪೆ’ಯೊಂದು ಅಧ್ಯಯನ ತಂಡವೊಂದರ ಕಣ್ಣಿಗೆ ಬಿದ್ದಿದೆ.
* ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಕೊಳವೊಂದರಲ್ಲಿ ಕಂಡು ಬಂದ ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಯ ಪಕ್ಕೆಯ ಮೇಲೆ ಪುಟ್ಟದಾದ ಅಣಬೆ ಮೊಳಕೆಯೊಡೆದಿದೆ. ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
* ಕೊಳೆತ ವಸ್ತು, ಮಣ್ಣು, ಮರದ ಮೇಲೆ ಮಾತ್ರ ಬೆಳೆಯುವ ಅಣಬೆಯು ಜೀವಂತ ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಶಿಲೀಂಧ್ರ (ಫಂಗೈ) ವರ್ಗಕ್ಕೆ ಸೇರಿದ ಅಣಬೆಯನ್ನು 'ಮೈಸಿನ್' ಅಥವಾ 'ಬಾನೆಟ್ ಮಕ್ರೂಮ್' ಎಂದು ಕರೆಯುತ್ತಾರೆ.
* ಕಪ್ಪೆಯಂತಹ ಉಭಯವಾಸಿಗಳು ಶಿಲೀಂಧ್ರ (ಫಂಗೈ) ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುವುದು ಸಹಜವಾಗಿದೆ.
* ಮಾಳ ಗ್ರಾಮದ ಕೊಳದಲ್ಲಿ 40ಕ್ಕೂ ಹೆಚ್ಚು 'ಗೋಲ್ಡನ್ ಬ್ಯಾಕ್ಸ್' ಕಪ್ಪೆಗಳಿವೆ. ಅದರಲ್ಲಿ ಒಂದು ಕಪ್ಪೆಯ ಮೇಲೆ ಮಾತ್ರ ಅಣಬೆ ಬೆಳೆದಿದೆ ಎಂದು ಹಿರಿಯ ಯೋಜನಾಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಧಕ ವೈ.ಟಿ.ಲೋಹಿತ್ ' ಅವರು ತಿಳಿಸಿದರು.
ಶನಿವಾರ, 10 ಫೆಬ್ರುವರಿ 2024
11:36 ಪೂರ್ವಾಹ್ನ
Daily PDF
ಪಶ್ಚಿಮ ಘಟ್ಟದ ಕೊಳದಲ್ಲಿ ‘ಅಣಬೆ ಕಪ್ಪೆ’ ಪತ್ತೆ
Authored by:
Bhagya R K