* ಪ್ರತಿಭಟನೆ, ಗಲಭೆಯ ವೇಳೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದರೆ ಹಾನಿ ಮಾಡಿದವರಿಂದಲೇ ಸಂಪೂರ್ಣ ಹಣ ವಸೂಲಿ ಮಾಡುವ ಕಾನೂನನ್ನು ಉತ್ತರಾಖಂಡದಲ್ಲಿ ಜಾರಿ ಮಾಡಲಾಗಿದೆ.
* ಉತ್ತರಾಖಂಡ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟ ವಸೂಲಿ ಮಸೂದೆಯನ್ನು ಕಳೆದ ತಿಂಗಳು ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರ ಸಹಿ ಬೀಳುವುದರೊಂದಿಗೆ ಕಾನೂನು ಜಾರಿಯಾಗಿದೆ.
* ಪ್ರತಿಭಟನೆ, ಧರಣಿ ನಡೆಸುವ ಸಮಯದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಅದಕ್ಕೆ ಹಾನಿ ಮಾಡಿದವರನ್ನೇ ಅಂದರೆ ಪ್ರತಿಭಟನೆಗೆ ಕರೆ ನೀಡಿದವರನ್ನೇ ಹೊಣೆ ಮಾಡಲಾಗುತ್ತದೆ.
* ಇದಲ್ಲದೆ ಅವರಿಗೆ 8 ಲಕ್ಷ ರೂ. ದಂಡವನ್ನೂ ವಿಧಿಸಲಾಗುತ್ತದೆ. ಜತೆಗೆ ಗಲಭೆ ನಿಯಂತ್ರಣಕ್ಕೆಂದು ನಿಯೋಜನೆಯಾಗುವ ಸಿಬ್ಬಂದಿ ಖರ್ಚು ವೆಚ್ಚದ ಮೊತ್ತವನ್ನೂ ಅವರಿಂದಲೇ ವಸೂಲಿ ಮಾಡಲಾಗುತ್ತದೆ. “ಇದು ದೇಶದ ಅತ್ಯಂತ ಕಠಿಣ ಗಲಭೆ ನಿಗ್ರಹ ಕಾನೂನು’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ
Published by Jyoti Angadi
21 ಸೆಪ್ಟೆಂಬರ್ 2024