➤ ಬೆಂಗಳೂರಿನ ‘ಅಂತರ್‌ರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ’ದ (ICTS) ಇನ್ಫೋಸಿಸ್-ಮಾಧವ ಚೇರ್ ಪ್ರೊಫೆಸರ್ ಆಗಿರುವ ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಪ್ರೊ. ಅಶೋಕ ಸೇನ್ ಅವರು 2026ನೇ ಸಾಲಿನ ಪ್ರತಿಷ್ಠಿತ 'ಆಸ್ಕರ್ ಸ್ಟೈನ್ ಪದಕ' (Oskar Klein Medal) ಗೆ ಭಾಜನರಾಗಿದ್ದಾರೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಈ ಜಾಗತಿಕ ಗೌರವವನ್ನು ಪಡೆದ ಭಾರತದ ಮೊಟ್ಟಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
➤ ಪ್ರೊ. ಅಶೋಕ ಸೇನ್ ಅವರ ಸಂಶೋಧನೆ ಮತ್ತು ಕೊಡುಗೆಗಳು: ಆಧುನಿಕ ಸ್ಟಿಂಗ್ ಥಿಯರಿ (String Theory) ಬೆಳವಣಿಗೆಯಲ್ಲಿ ಪ್ರೊ. ಅಶೋಕ ಸೇನ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಪ್ರಮುಖ ಸಂಶೋಧನಾ ಕೊಡುಗೆಗಳು ಕೆಳಗಿನಂತಿವೆ:
- ಎಸ್-ಡ್ಯುಯಾಲಿಟಿ (S-Duality): ಕ್ವಾಂಟಮ್ ಕ್ಷೇತ್ರ ಸಿದ್ಧಾಂತದಲ್ಲಿ ಕ್ರಾಂತಿಕಾರಿ ಹೆಜ್ಜೆಯಾದ ಎಸ್-ಡ್ಯುಯಾಲಿಟಿ ಕುರಿತ ಸಂಶೋಧನೆ.
- ಬ್ಲ್ಯಾಕ್‌ ಹೋಲ್ ಎಂಟ್ರೊಪಿ (Black Hole Entropy): ಕಪ್ಪು ಕುಳಿಗಳ ಎಂಟ್ರೊಪಿಯ ನಿಖರ ಲೆಕ್ಕಾಚಾರ.
- ಸ್ಟಿಂಗ್ ಫೀಲ್ಡ್ ಥಿಯರಿ (String Field Theory): ಬ್ರಹ್ಮಾಂಡದ ಮೂಲಭೂತ ಸ್ವಭಾವವನ್ನು ವಿವರಿಸುವ ಸಿದ್ಧಾಂತಗಳಲ್ಲಿ ಮಹತ್ವದ ಅಧ್ಯಯನ.
- ಇವರ ಈ ಅದ್ಭುತ ಸಂಶೋಧನೆಗಳು ಜಾಗತಿಕ ಮಟ್ಟದಲ್ಲಿ ಭೌತಶಾಸ್ತ್ರದ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಿವೆ.
➤ 'ಆಸ್ಕರ್ ಸ್ಟೈನ್ ಪದಕ'ದ ಇತಿಹಾಸ ಮತ್ತು ಮಹತ್ವ
- ಸ್ವೀಡನ್‌ನ ಪ್ರಸಿದ್ಧ ಭೌತಶಾಸ್ತ್ರಜ್ಞ ಆಸ್ಕರ್ ಸ್ಟೈನ್ (Oskar Klein) ಅವರ ಸ್ಮರಣಾರ್ಥ ಈ ಪದಕವನ್ನು ನೀಡಲಾಗುತ್ತದೆ.
- ಭೌತಶಾಸ್ತ್ರ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ವಿಜ್ಞಾನಿಗಳನ್ನು ಗೌರವಿಸಲು 1988ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
- ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯ ಮತ್ತು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ನೊಬೆಲ್ ಸಮಿತಿಯು ಪ್ರತಿವರ್ಷ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ.
- ಈ ಹಿಂದೆ ಸ್ಟೀಫನ್ ಹಾಕಿಂಗ್, ಪೀಟರ್ ಹಿಗ್ಸ್, ಚೆನ್-ನಿಂಗ್ ಯಾಂಗ್, ಸ್ಟೀವನ್ ವೀನ್‌ಬರ್ಗ್ ಮತ್ತು ಹ್ಯಾನ್ಸ್ ಬೆಥೆ ಮುಂತಾದ ನೊಬೆಲ್ ಪ್ರಶಸ್ತಿ ವಿಜೇತ ದಿಗ್ಗಜರು ಈ ಪದಕವನ್ನು ಪಡೆದಿದ್ದಾರೆ. ಇದು ಈ ಪ್ರಶಸ್ತಿಯ ಅಂತರರಾಷ್ಟ್ರೀಯ ಮಹತ್ವವನ್ನು ಸಾರುತ್ತದೆ.
➤ ಇತರ ಪ್ರಮುಖ ಗೌರವಗಳು: ಪ್ರೊ. ಅಶೋಕ ಸೇನ್ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಗಾಗಿ ಈಗಾಗಲೇ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳೂ ಇವರಿಗೆ ಸಂದಿವೆ.

ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.