* ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸಿದ ಪರಿಶುದ್ಧ ಗಾಳಿ ಹೊಂದಿರುವ ಟಾಪ್ 10 ನಗರಗಳ ಪಟ್ಟಿಯನ್ನು ಗುರುವಾರ(ನವೆಂಬರ್ 14) ಬಿಡುಗಡೆ ಮಾಡಿದ್ದು, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಸಿಗುವ ಪಟ್ಟಣಗಳ ಪಟ್ಟಿಯಲ್ಲಿ ಮಂಜಿನ ನಗರಿ ಮೊದಲ ಸ್ಥಾನ ಗಿಟ್ಟಿಸಿದೆ.
* ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ (AQI) ಸೂಚ್ಯಂಕ ಪ್ರಮಾಣ ಪ್ರಕಾರ ಕೊಡಗಿನಲ್ಲಿ 28, ಚಿಕ್ಕಮಗಳೂರಿನಲ್ಲಿ 30 ಹಾಗೂ ಚಿಕ್ಕಬಳ್ಳಾಪುರದಲ್ಲಿ 28 ಅಂಕ ಪಡೆದಿವೆ.
* 2 ನೇ ಸ್ಥಾನವನ್ನು ಪಾಲ್ಕಲೈಪೆರೂರ್ ಪಡೆದುಕೊಂಡಿದ್ದರೆ, ಹೀಗೆ ಕ್ರಮವಾಗಿ ಕರೂರು, ತಿರುನೆಲ್ವೇಲಿ, ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತ್ಕುಡಿ ಹಾಗೂ ಪುದುಚೇರಿ ಕ್ರಮವಾದ ಸ್ಥಾನಗಳನ್ನು ಪಡೆದಿವೆ.
* ವರ್ಷದ ಬಹುತೇಕ ದಿನ ಗಾಳಿಯ ಗುಣಮಟ್ಟ ಅತ್ಯುತ್ತಮ ಮಟ್ಟದಲ್ಲಿದೆ. ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ ದೆಹಲಿಯಲ್ಲಿ ಎಕ್ಯೂಐ ಬರೋಬ್ಬರಿ 424 ರಷ್ಟು ದಾಖಲಾಗಿದೆ.
* ಕಳೆದ ವರ್ಷ ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಬಿಡುಗಡೆ ಮಾಡಿದ ಪಟ್ಟಿಗಳಲ್ಲಿ ಮಡಿಕೇರಿ 5ನೇ ಸ್ಥಾನ ಪಡೆದಿತ್ತು.
* ಮಡಿಕೇರಿಯಲ್ಲಿ ಗಾಳಿಯ ಮಾಲಿನ್ಯದ ಪ್ರಮಾಣ ಎಕ್ಯೂಐ ಸೂಚ್ಯಂಕದ ಪ್ರಕಾರ 10 ಆಗಿದ್ದರೆ, ಪಾಲ್ಕಲೈಪೆರೂರ್ 17, ಕರೂರು 22, ತಿರುನಲ್ವೇಲಿ 23, ತಿರುಪತಿ 24, ಊಟಿ 26, ವೆಲ್ಲೂರ್ 26, ರಾಣಿಪೇಟ್ 26, ಗದಗ 32, ತೂತುಕುಡಿ 32 ಹಾಗೂ ಪುದುಚೆರಿಯಲ್ಲಿ 34 ಆಗಿದೆ.
ಪರಿಶುದ್ಧ ಗಾಳಿ' ಗೆ ದೇಶದಲ್ಲೇ ಅಗ್ರಸ್ಥಾನ ಪಡೆದ ಮಂಜಿನ ನಗರಿ 'ಮಡಿಕೇರಿ'..!
Published by Jyoti Angadi
19 ನವೆಂಬರ್ 2024