* ರಾಜ್ಯ ಸರ್ಕಾರ ಹಲವು ವರ್ಷಗಳ ಆಗ್ರಹಕ್ಕೆ ಮನ್ನಣೆ ನೀಡಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ತೀರ್ಮಾನ ಕೈಗೊಂಡಿದೆ.
* ಈ ಕುರಿತು ಮಂಗಳವಾರ ತಡರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಬುಧವಾರ ಸದನದಲ್ಲಿ ಹೇಳಿಕೆ ನೀಡುವ ಹಾಗೂ ಎರಡು ದಿನಗಳಲ್ಲಿ ಆದೇಶ ಹೊರಡಿಸುವ ನಿರೀಕ್ಷೆ ಇದೆ.
* ನಾಗಮೋಹನದಾಸ್ ಆಯೋಗ ನೀಡಿದ ವರದಿಯನ್ನು ಪರಿಷ್ಕರಿಸಿ ಸರ್ಕಾರ 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ – ಎಡಗೈ, ಬಲಗೈ ತಲಾ ಶೇ.6 ಹಾಗೂ ಕೊರಚ, ಕೊರಮ, ಭೋವಿ, ಲಂಬಾಣಿ ಸೇರಿದ "ಸ್ಪೃಶ್ಯ" ಗುಂಪಿಗೆ ಶೇ.5 ಮೀಸಲಾತಿ ಹಂಚಿಕೆ.
* ಆಯೋಗದ ಮೂಲ ವರದಿಯಲ್ಲಿ 101 ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಭಜಿಸಿ, 17% ಮೀಸಲಾತಿಯನ್ನು ಕ್ರಮವಾಗಿ ಪ್ರವರ್ಗ A-1%, B-6%, C-5%, D-4%, E-1% ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿತ್ತು.
* ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ವರದಿ ವಿವರಿಸಿದರು. ಕೆಲ ಸಚಿವರು ತಮ್ಮ ಸಮುದಾಯಗಳಿಗೆ ಸಮಾನ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು. ಕೆಲವು ಜಾತಿಗಳ ಗುರುತಿನ ಗೊಂದಲ ಬಗೆಹರಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು.
* ಆಯೋಗ ಹೆಚ್ಚುವರಿ ಶಿಫಾರಸುಗಳನ್ನೂ ಮಾಡಿದೆ – ನೇಮಕಾತಿ ಸ್ಥಗಿತದಿಂದ ವಯೋಮಿತಿ ಮೀರಿದವರಿಗೆ ವಿನಾಯಿತಿ, ಭರ್ತಿಯಾಗದ ಹುದ್ದೆಗಳನ್ನು ಕ್ಯಾರಿ ಫಾರ್ವರ್ಡ್ ಮೂಲಕ ಪೂರೈಸುವುದು, ಅವಮಾನಕಾರಿ ಜಾತಿ ಹೆಸರು ಬದಲಾಯಿಸಲು ಅವಕಾಶ, ಮತ್ತು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಮುಂತಾದ ಹೆಸರಿನ ಗೊಂದಲಕ್ಕೆ ಪರಿಹಾರ.
ಬುಧವಾರ, 20 ಆಗಸ್ಟ್ 2025
1:52 ಅಪರಾಹ್ನ
Daily PDF
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ : ಎಡಗೈಗೂ 6 ಬಲಗೈಗೂ 6
Authored by:
Akshata Halli