➤ ಜೋಧ್‌ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್: ಜೋಧ್‌ಪುರದಲ್ಲಿ ₹480 ಕೋಟಿ ವೆಚ್ಚದಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಅತ್ಯಾಧುನಿಕ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಯಿತು. ಇದು ಮಾರ್ವಾಡ ಭಾಗದ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ದೊಡ್ಡ ಶಕ್ತಿ ನೀಡಲಿದೆ.
➤ ರಾಜಸ್ಥಾನ ಇಂಧನ ಸಂಸ್ಕರಣಾಗಾರ (Rajasthan Refinery) ಲೋಕಾರ್ಪಣೆ: ಪಶ್ಚಿಮ ಏಷ್ಯಾದ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತವು ತನ್ನ ತೈಲ ಆಮದನ್ನು 40 ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಪ್ರಸ್ತುತ ಭಾರತವು ವಿಶ್ವದ 4ನೇ ಅತಿ ದೊಡ್ಡ ತೈಲ ಸಂಸ್ಕರಣಾ ಸಾಮರ್ಥ್ಯ (Refinery Capacity) ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
➤ ಶೇಖಾವತಿ ನೀರಿನ ಯೋಜನೆ: ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳ ಜಂಟಿ ಒಪ್ಪಂದದಡಿ, ಹರಿಯಾಣದ ಹಥ್ನಿಕುಂಡ್ ಬ್ಯಾರೇಜ್‌ನಿಂದ (Hathnikund Barrage) ಭೂಗತ ಪೈಪ್‌ಲೈನ್ ಮೂಲಕ ರಾಜಸ್ಥಾನದ ಸೀಕರ್, ಚುರು ಮತ್ತು ಝುಂಝುನು ಪ್ರಾಂತ್ಯಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ.
➤ ಗ್ರೀನ್ ಎನರ್ಜಿ ಮತ್ತು ಪರಿಸರ:
- ಮರಭೂಮಿ ವಿಸ್ತರಣೆ ತಡೆಯಲು ಪ್ರಧಾನಿಯವರು ಪವಿತ್ರ 'ಖೇಜ್ರಿ' (Khejri) ಸಸಿಯನ್ನು ನೆಟ್ಟರು.
- ಹಸಿರು ಇಂಧನ ಉತ್ತೇಜನಕ್ಕಾಗಿ ಪಿಎಂ ಸೂರ್ಯ ಘರ್ ಯೋಜನೆ ಹಾಗೂ ಪಿಎಂ ಕುಸುಮ್ (PM-KUSUM) ಯೋಜನೆ ಅಡಿ ರೈತರಿಗೆ ಸೋಲಾರ್ ಪಂಪ್‌ಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ, ಜೈಪುರ ಮೆಟ್ರೋ ವಿಸ್ತರಣೆಗೂ ಚಾಲನೆ ನೀಡಲಾಗಿದೆ.