* 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ 14 ರಾಷ್ಟ್ರಗಳು ತಮ್ಮ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.
* ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.
* 2014 ರಿಂದ 14 ದೇಶಗಳ ನೀಡಿದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳು :
- ಅಫ್ಘಾನಿಸ್ತಾನ : ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್– 2016
- ಸೌದಿ ಅರೇಬಿಯಾ : ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್– 2016ರಲ್ಲಿ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವ ನರೇಂದ್ರ ಮೋದಿಗೆ ಸಿಕ್ಕಿದೆ.
- ಪ್ಯಾಲೆಸ್ಟೈನ್ : ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್: 2018ರಲ್ಲಿ
- ಯುನೈಟೆಡ್ ನೇಷನ್ಸ್ : 2018ರಲ್ಲಿ ಯುಎನ್ ಚಾಂಪಿಯನ್ ಆಫ್ ದಿ ಅರ್ಥ್ ಅವಾರ್ಡ್ ನೀಡಿ ಗೌರವಿಸಿತು.
* ಪ್ರಧಾನಿ ನರೇಂದ್ರ ಮೋದಿ : ನೈಲ್ ಪ್ರಶಸ್ತಿಯೂ ಸೇರಿ 9 ವರ್ಷದಲ್ಲಿ ಪ್ರಧಾನಿ ಮೋದಿಗೆ 13 ದೇಶಗಳಿಂದ ಸಿಕ್ಕ ಅಗ್ರಮಾನ್ಯ ಪ್ರಶಸ್ತಿಗಳ ಪಟ್ಟಿ
- ಯುಎಇ: ಆರ್ಡರ್ ಆಫ್ ಝಾಯೆದ್ ಅವಾರ್ಡ್ ಸಂಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ನರೇಂದ್ರ ಮೋದಿ ಅವರಿಗೆ ಲಭಿಸಿದೆ.
- ರಷ್ಯಾ : ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದು 2019ರಲ್ಲಿ ಮೋದಿಗೆ ಲಭಿಸಿದೆ.
- ಮಾಲ್ಡೀವ್ಸ್ : ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್ ಮೋದಿಗೆ 2019ರಲ್ಲಿ ದೊರೆತಿತ್ತು.
- ಬಹರೇನ್ : 2019ರಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್ ಲಭಿಸಿತ್ತು.
- ಅಮೆರಿಕ : ಲೆಜಿಯನ್ ಆಫ್ ಮೆರಿಟ್: 2020ರಲ್ಲಿ ಮೋದಿಗೆ ಇಂಥದ್ದೊಂದು ಅಪೂರ್ವ ಪ್ರಶಸ್ತಿ ಸಿಕ್ಕಿತ್ತು.
- ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್: 2021ರಲ್ಲಿ ಭೂತಾನ್ ಈ ಪ್ರಶಸ್ತಿ ನೀಡಿತ್ತು.
- ಆರ್ಡರ್ ಆಫ್ ಫಿಜಿ : 2023 ಮೇ ತಿಂಗಳಲ್ಲಿ ಮೋದಿಗೆ ಈ ಗೌರವ ದೊರೆತಿತ್ತು.
- ಪಪುವಾ ನ್ಯೂಗಿನಿಯಾ: ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು ಇದು ಆ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾಗಿದೆ.
- ಆರ್ಡರ್ ಆಫ್ ನೈಲ್: 2023ರಲ್ಲಿ ಈಜಿಪ್ಟ್ ನೀಡಿತ್ತು.
- ಗ್ರ್ಯಾಂಡ್ ಕ್ರಾಸ್ಆಫ್ ಲೀಜನ್ ಆಫ್ ಆನರ್-2023ರ ಜುಲೈನಲ್ಲಿ ಫ್ರ್ಯಾನ್ಸ್ ಈ ಪ್ರಶಸ್ತಿಯನ್ನು ಮೋದಿಗೆ ನೀಡಿತ್ತು.
- ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನ್ 2023ರ ಆಗಸ್ಟ್ನಲ್ಲಿ ಗ್ರೀಸ್ ನೀಡಿತ್ತು.
ಶನಿವಾರ, 16 ಡಿಸೆಂಬರ್ 2023
10:27 ಪೂರ್ವಾಹ್ನ
Daily PDF
ಪ್ರಧಾನಿ ನರೇಂದ್ರ ಮೋದಿ ಅವರಿಗೆ 2014ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರ
Authored by:
Bhagya R K