* ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಇಸ್ಕಾನ್ ಕಾಂಪ್ಲೆಕ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 15 ರಂದು ಉದ್ಘಾಟಿಸಿದರು. 9 ಎಕರೆ ವಿಸ್ತೀರ್ಣದ ಮತ್ತು ವೇದ ಶಿಕ್ಷಣ ಕೇಂದ್ರ, ಸಭಾಂಗಣವನ್ನು ಒಳಗೊಂಡಿರುವ ಇಸ್ಕಾನ್ ದೇವಾಲಯದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು.
* ಖಾರ್ಘರ್‌ನಲ್ಲಿ ಇಸ್ಕಾನ್ ಸ್ಥಾಪಿಸಿದ ಶ್ರೀ ಶ್ರೀ ರಾಧಾ ಮೋಹನ್ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
* ಈ ದೇವಾಲಯವು ಯುವ ಪೀಳಿಗೆಯನ್ನು ಆಕರ್ಷಿಸಲು ಈ ಸಂಕೀರ್ಣವು ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಆಧರಿಸಿದ ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. ಇಲ್ಲಿ ವೃಂದಾವನದ 12 ಕಾಡುಗಳಿಂದ ಪ್ರೇರಿತವಾದ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ.
* ವಿಶ್ವದಾದ್ಯಂತ ಸುಮಾರು 800ಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳಿವೆ. ಅವುಗಳಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿರುವ ಚಂದ್ರೋದಯ ಮಂದಿರ್ ದೇವಸ್ಥಾನವು ವಿಶ್ವದ ಅತಿ ದೊಡ್ಡ ಇಸ್ಕಾನ್ ದೇವಾಲಯ ಎಂದು ತಿಳಿಸಲಾಗಿದೆ. ಈ ದೇವಸ್ಥಾನಕ್ಕೆ ‘ಟೆಂಪಲ್ ಆಫ್ ವೇದಿಕ್ ಪ್ಲಾನೆಟೋರಿಯಂ’ ಎಂಬ ಮತ್ತೊಂದು ಹೆಸರೂ ಇದೆ.
* ಈ ದೇವಸ್ಥಾನ ಹಾಗೂ ಅಕ್ಕಪಕ್ಕದಲ್ಲಿರುವ ವಸತಿ ಗೃಹಗಳನ್ನು ಬಿಳಿ ಹಾಗೂ ಕಂದು ಬಣ್ಣದ ಅಮೃತ ಶಿಲೆಯಿಂದ ನಿರ್ಮಿಸಲಾಗಿದೆ. ದೇವಸ್ಥಾನದ ಹಾಲ್ ನಲ್ಲಿ 3ಡಿ ತಂತ್ರಜ್ಞಾನದಿಂದ ತಯಾರಿಸಲಾದ ಶ್ರೀ ಕೃಷ್ಣನ ಪೋಟೋಗಳನ್ನು ತೂಗುಹಾಕಲಾಗಿದೆ. ದೇವಸ್ಥಾನದ ಅನೇಕ ಬಾಗಿಲುಗಳಿದ್ದು ಅವೆಲ್ಲವುಗಳನ್ನು ಬೆಳ್ಳಿಯಿಂದ ತಯಾರಿಸಲಾಗಿದೆ. ಅವುಗಳ ಮೇಲೆ ಕತ್ತೆ, ಚಕ್ರ ಹಾಗೂ ಕೇಸರಿಧ್ವಜದ ಚಿತ್ರಗಳನ್ನು ಕೆತ್ತಲಾಗಿದೆ.
ಗುರುವಾರ, 16 ಜನವರಿ 2025
10:48 ಪೂರ್ವಾಹ್ನ
Daily PDF
ಪ್ರಧಾನಿ ಮೋದಿ : ನವಿ ಮುಂಬೈನಲ್ಲಿ ಏಷ್ಯಾದ 2ನೇ ಅತಿದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟನೆ
Authored by:
Bhagya R K