*ನಿವೃತ್ತ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ.ಜೋಶಿ ಅವರು ಪ್ರಧಾನಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ಮೂಲಸೌಕರ್ಯಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು .
* ಅಂಡಮಾನ್ ಮತ್ತು ನಿಕೋಬಾರ್ ಅನ್ನು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ವಲಯವನ್ನಾಗಿ ಪರಿವರ್ತಿಸುವ ಮತ್ತು ಹೊಸ ವಿಮಾನ ನಿಲ್ದಾಣ, ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್, ವಿದ್ಯುತ್ ಸ್ಥಾವರ ಸೇರಿದಂತೆ ಗ್ರೇಟ್ ನಿಕೋಬಾರ್ ದ್ವೀಪ (ಜಿಎನ್‌ಐ) ಯೋಜನೆಯ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಿದರು,
* ದ್ವೀಪಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಕಳೆದ ವರ್ಷ ದೇಶಿಯ ಪ್ರವಾಸಿಗರ ಭೇಟಿ ಶೇ 41ರಷ್ಟು ಮತ್ತು ವಿದೇಶಿ ಪ್ರವಾಸಿಗರ ಭೇಟಿ ಶೇ 27ರಷ್ಟು ಹೆಚ್ಚಾಗಿದೆ ಎಂದು ಜೋಶಿ ಅವರು ಪ್ರಧಾನಿಗೆ ತಿಳಿಸಿದ್ದಾರೆ.
* ಪ್ರಧಾನಿ ಮೋದಿಯವರ ನಂತರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಜೋಶಿ ಭೇಟಿ ಮಾಡಿದರು.
ಶುಕ್ರವಾರ, 03 ಅಕ್ಟೋಬರ್ 2025
4:24 ಅಪರಾಹ್ನ
Daily PDF
ಪ್ರಧಾನಿ ಮೋದಿ ಭೇಟಿಯಾದ ಅಡ್ಮಿರಲ್ ಡಿ.ಕೆ. ಜೋಶಿ
Authored by:
Jyoti Angadi