* ದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪಿಂಚಣಿ ನೀಡಲು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಮಾನ್‌ಧನ್ ಯೋಜನೆಯಡಿ (ಪಿಎಂಕೆಎಂವೈ) ಇಲ್ಲಿಯವರೆಗೆ 23.30 ಲಕ್ಷ ರೈತರು ಹೆಸರು ನೋಂದಾಯಿಸಿದ್ದಾರೆ.
* ಕಿಸಾನ್ ಮಾನ್‌ಧನ್ 'ಯೋಜನೆಯಡಿ ಇಲ್ಲಿಯವರೆಗೆ ಕರ್ನಾಟಕದಲ್ಲಿ 41,683. ರೈತರು ಹೆಸರು ನೋಂದಾಯಿಸಿದ್ದಾರೆ.
* 2019ರ ಸೆಪ್ಟೆಂಬರ್‌ನಲ್ಲಿ ಈ ಕಿಸಾನ್ ಮಾನ್‌ಧನ್ ಯೋಜನೆಯು ಅನುಷ್ಠಾನಗೊಂಡಿದೆ
* 18ರಿಂದ 40 ವರ್ಷದ ಒಳಗಿನ ರೈತರು ಸೌಲಭ್ಯಕ್ಕೆ ಅರ್ಹರಿರುತ್ತಾರೆ. 60 ವರ್ಷದ ಬಳಿಕ ಅವರಿಗೆ ಮಾಸಿಕ ₹3 ಸಾವಿರ ಪಿಂಚಣಿ ಸಿಗಲಿದೆ' ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು, ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
* ವಯಸ್ಸಿನ ಆಧಾರದ ಮೇಲೆ ಫಲಾನುಭವಿಗಳು ಮಾಸಿಕವಾಗಿ ₹55ರಿಂದ ₹ 200 ವಂತಿಗೆ ಪಾವತಿಸಬೇಕಿದೆ. ರೈತರು ಪಾವತಿಸಿದ ಮೊತ್ತಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ಸಮಾನ್ಯ ಮೊತ್ತವನ್ನು ಪಿಂಚಣಿ ನಿಧಿಗೆ ಪಾವತಿ ಮಾಡುತ್ತದೆ.
ಬುಧವಾರ, 07 ಫೆಬ್ರುವರಿ 2024
11:11 ಪೂರ್ವಾಹ್ನ
Daily PDF
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ: ರಾಜ್ಯದ 41,683 ರೈತರ ಹೆಸರು ನೊಂದಣಿ
Authored by:
Akshata Halli