* ಕೇಂದ್ರ ಸರ್ಕಾರವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಸೆಪ್ಟೆಂಬರ್ 13(ಶುಕ್ರವಾರ)ರಂದು ತಿಳಿಸಿದ್ದಾರೆ.
* ಈ ಹಿಂದಿನ ಹೆಸರು ವಸಾಹತುಶಾಹಿ ಪರಂಪರೆಯನ್ನು ಹೊಂದಿದ್ದು, ಶ್ರೀ ವಿಜಯ ಪುರಂ ಎಂಬ ಹೊಸ ಹೆಸರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯವನ್ನು ಸಂಕೇತಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
* ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಾಟಿಯಿಲ್ಲದ ಸ್ಥಾನವನ್ನು ಹೊಂದಿವೆ.
* ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿದ್ದ ಈ ದ್ವೀಪ ಪ್ರದೇಶ ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿಯ ಮಹತ್ವಾಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ.
* ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಮ್ಮ ತ್ರಿವರ್ಣ ಧ್ವಜದ ಮೊದಲ ಅನಾವರಣವನ್ನು ಆಯೋಜಿಸಿದ ಸ್ಥಳವಾಗಿದೆ. ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಸೆಲ್ಯುಲಾರ್ ಜೈಲು ಇರುವ ಸ್ಥಳವಾಗಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.
ಶನಿವಾರ, 14 ಸೆಪ್ಟೆಂಬರ್ 2024
10:57 ಪೂರ್ವಾಹ್ನ
Daily PDF
ಪೋರ್ಟ್ ಬ್ಲೇರ್ಗೆ 'ಶ್ರೀ ವಿಜಯ ಪುರಂ' ಎಂದು ಮರುನಾಮಕರಣ
Authored by:
Jyoti Angadi