* ದೇಶದ 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಪಿಎಂ 'ಸೂರ್ಯಘರ್ ಮುಫ್ತ್ ಬಿಜಲಿ' ಯೋಜನೆಗೆ 75 ಸಾವಿರ ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿರುವ ಪ್ರಧಾನಿ ಮೋದಿ, ಪ್ರತಿ ತಿಂಗಳು 300 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
* 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಜೊತೆಗೆ ಜನರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ನೀಡುವುದರ ಜೊತೆಗೆ ರಿಯಾಯಿತಿ ದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತದೆ. ಯಾವುದೇ ಹೊರೆಯಾಗದಂತೆ ಕೇಂದ್ರ ನೋಡಿಕೊಳ್ಳುತ್ತದೆ. ಸ್ಥಳೀಯ ಸಂಸ್ಥೆಗಳು ಮನೆ ರೂಫ್ ಟಾಪ್ ಸೋಲಾರ್ ಜನಪ್ರಿಯಗೊಳಿಸಲು ಸೂಚಿಸಲಾಗಿದೆ. ಯೋಜನೆಯಿಂದ ಜನರಿಗೆ ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್, ಉದ್ಯೋಗ ಸೃಷ್ಟಿ ಆಗಲಿದೆ. ಇದಕ್ಕೆ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಎಕ್ಸ್ ಖಾತೆ ಮೂಲಕ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
* ಪಿಎಂ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಎಂದರೆ...?
ಈ ಯೋಜನೆಯಡಿಯಲ್ಲಿ, ಜನರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡಲಾಗುತ್ತದೆ. ಜನರು ಈಗ ತಮ್ಮ ಮೇಲ್ಛಾವಣಿಯ ಮೇಲೆ 1 ರೂಪಾಯಿ ಖರ್ಚು ಮಾಡದೇ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಶೇ.40 ರಷ್ಟು ಸಬ್ಸಿಡಿಯನ್ನು ಪಡೆಯುತ್ತಾರೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿಯಲ್ಲಿ ಶೇಕಡಾ 60 ರಷ್ಟು ಸಬ್ಸಿಡಿ ಪಡೆಯುತ್ತಾರೆ. ಉಳಿದ 40 ರಷ್ಟು ಪ್ರತಿಶತ ಹಣ ಸಾಲವಾಗಿ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
* ಮೇಲ್ಛಾವಣಿ ವಿದ್ಯುತ್ ಮೂಲಕ ಸಾಲ ಮರುಪಾವತಿ
ಪ್ರತಿ ರಾಜ್ಯಕ್ಕೂ ಪ್ರತ್ಯೇಕ SPVಗಳನ್ನು ರಚಿಸುತ್ತದೆ. ಸರ್ಕಾರದಿಂದ ಪಡೆದ 60 ಪ್ರತಿಶತ ಸಹಾಯಧನ ಹೊರತುಪಡಿಸಿ, ಉಳಿದ 40 ಪ್ರತಿಶತ ಎಸ್‌ಪಿವಿಯಿಂದ ಸಾಲವಾಗಿ ತೆಗೆದುಕೊಳ್ಳಬಹುದು. ಫಲಾನುಭವಿಯ ಮೇಲ್ಛಾವಣಿಯಲ್ಲಿ ಅವರ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು SPV ಖರೀದಿಸುತ್ತದೆ ಮತ್ತು ಅದರಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳುತ್ತದೆ.ಈ ರೀತಿ ನಿಮ್ಮ ಸಾಲವನ್ನು 10 ವರ್ಷದಲ್ಲಿ ಪಾವತಿಸಬಸಹುದು. ನಂತರ ಸೌರ ಫಲಕವನ್ನು ಫಲಾನುಭವಿಯ ಹೆಸರಿಗೆ ವರ್ಗಾಯಿಸಲಾಗುತ್ತದೆ.
PM Surya Ghar Yojana :1 ಕೋಟಿ ಮನೆಗಳಿಗೆ '300 ಯೂನಿಟ್ ವರೆಗೆ ಉಚಿತ ವಿದ್ಯುತ' ಘೋಷಣೆ
Published by Akshata Halli
14 ಫೆಬ್ರವರಿ 2024