➤ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 10 ಕೋಟಿ (100 Million) ಫಾಲೋವರ್‌ಗಳನ್ನು ಹೊಂದಿದ ವಿಶ್ವದ ಮೊತ್ತಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೆಬ್ರವರಿ 26, 2026 ರಂದು ಈ ಮಹತ್ವದ ಮೈಲಿಗಲ್ಲನ್ನು ತಲುಪುವ ಮೂಲಕ, ಡಿಜಿಟಲ್ ಲೋಕದಲ್ಲಿ ತಮ್ಮ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
➤ ವಿಶ್ವ ನಾಯಕರ ನಡುವೆ ಮೋದಿ ನಂಬರ್ 1: ಇನ್‌ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಜಾಗತಿಕ ಮಟ್ಟದ ಇತರ ಪ್ರಬಲ ನಾಯಕರಿಗಿಂತ ಅತಿ ಹೆಚ್ಚು ಪಟ್ಟು ಹೆಚ್ಚಿದೆ. ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡರಷ್ಟು ಹೆಚ್ಚು ಫಾಲೋವರ್‌ಗಳನ್ನು ಮೋದಿ ಹೊಂದಿದ್ದಾರೆ.
ವಿಶ್ವದ ಪ್ರಮುಖ ನಾಯಕರ ಇನ್‌ಸ್ಟಾಗ್ರಾಂ ಫಾಲೋವರ್ಸ್ ವಿವರ:
ನರೇಂದ್ರ ಮೋದಿ - ಭಾರತ - 10 ಕೋಟಿ (100 Million) ಫಾಲೋವರ್ಸ್
ಡೊನಾಲ್ಡ್ ಟ್ರಂಪ್ - ಅಮೆರಿಕ - 4.32 ಕೋಟಿ ಫಾಲೋವರ್ಸ್
ಪ್ರಬೋವೊ ಸುಬಿಯಾಂಟೊ - ಇಂಡೋನೇಷ್ಯಾ - 1.5 ಕೋಟಿ ಫಾಲೋವರ್ಸ್
ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ - ಬ್ರೆಜಿಲ್ - 1.44 ಕೋಟಿ ಫಾಲೋವರ್ಸ್
ರೆಸೆಪ್ ತಯ್ಯಿಪ್ ಎರ್ಡೋಗನ್ - ಟರ್ಕಿ - 1.16 ಕೋಟಿ ಫಾಲೋವರ್ಸ್
ಜೇವಿಯರ್ ಮಿಲೈ - ಅರ್ಜೆಂಟೀನಾ - 64 ಲಕ್ಷ ಫಾಲೋವರ್ಸ್
➤ ಕೇವಲ ಜಾಗತಿಕವಾಗಿ ಮಾತ್ರವಲ್ಲದೆ, ದೇಶೀಯವಾಗಿಯೂ ಮೋದಿ ಅವರ ಡಿಜಿಟಲ್ ಹವಾ ಜೋರಾಗಿದೆ. ಭಾರತದ ಇತರ ರಾಜಕಾರಣಿಗಳಿಗೆ ಹೋಲಿಸಿದರೆ ಮೋದಿ ಬಹಳ ಮುಂದಿದ್ದಾರೆ.
ಯೋಗಿ ಆದಿತ್ಯನಾಥ್: 1.61 ಕೋಟಿ ಫಾಲೋವರ್ಸ್ (ಎರಡನೇ ಸ್ಥಾನ).
ರಾಹುಲ್ ಗಾಂಧಿ: ಸುಮಾರು 1.26 ಕೋಟಿ ಫಾಲೋವರ್ಸ್ (ಮೂರನೇ ಸ್ಥಾನ).
➤ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ವರ್ಷವೇ ಅಂದರೆ 2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ 12 ವರ್ಷಗಳಲ್ಲಿ ಅವರು 10 ಕೋಟಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯುವ ಸಮುದಾಯದೊಂದಿಗೆ ಸಂವಹನ ನಡೆಸಲು ಅವರು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೇವಲ ಇನ್‌ಸ್ಟಾಗ್ರಾಂ ಮಾತ್ರವಲ್ಲದೆ, X (ಹಿಂದಿನ ಟ್ವಿಟ್ಟರ್) ನಲ್ಲಿ 10.6 ಕೋಟಿ ಹಾಗೂ ಫೇಸ್‌ಬುಕ್‌ನಲ್ಲಿ 5.4 ಕೋಟಿ ಫಾಲೋವರ್‌ಗಳನ್ನು ಹೊಂದುವ ಮೂಲಕ ಮೋದಿ ಡಿಜಿಟಲ್ ಸಾರಥಿಯಾಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ, 27 ಫೆಬ್ರುವರಿ 2026
10:24 ಪೂರ್ವಾಹ್ನ
Daily PDF
ವಿಶ್ವ ದಾಖಲೆ ಬರೆದ ಪ್ರಧಾನಿ ಮೋದಿ: ಇನ್‌ಸ್ಟಾಗ್ರಾಂನಲ್ಲಿ 10 ಕೋಟಿ ಫಾಲೋವರ್ಸ್ ಗಳಿಸಿದ ವಿಶ್ವದ ಮೊದಲ ನಾಯಕ!
Authored by:
Heena Sheregar