➤ ಆದರೆ, ಅವಕಾಶಗಳ ಲಭ್ಯತೆಗೆ ಹೋಲಿಸಿದರೆ ಕೋರ್ಸ್ ಪೂರ್ಣಗೊಳಿಸಿದ ಅಥವಾ ಉದ್ಯೋಗಕ್ಕೆ ಸೇರಿದ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2026ರ ಮಾರ್ಚ್‌ನಲ್ಲಿ ಯೋಜನೆಯ ನಿಯಮಗಳಿಗೆ ಪ್ರಮುಖ ತಿದ್ದುಪಡಿಗಳನ್ನು ತಂದಿದೆ.
➤ ಕೇಂದ್ರ ಬಜೆಟ್ 2024-25ರಲ್ಲಿ ಘೋಷಣೆಯಾಗಿ 2024ರ ಅಕ್ಟೋಬರ್‌ನಲ್ಲಿ ಚಾಲನೆ ಪಡೆದ ಪ್ರಧಾನಮಂತ್ರಿ ಇಂಟರ್ನ್‌ಷಿಪ್ ಯೋಜನೆಯು, ₹8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಮತ್ತು ಪ್ರೀಮಿಯರ್ ಅಲ್ಲದ ಸಾಮಾನ್ಯ ಶಿಕ್ಷಣ ಸಂಸ್ಥೆಗಳ 18 ರಿಂದ 25 ವರ್ಷ ವಯಸ್ಸಿನ ಯುವಜನತೆಗೆ ಮುಂದಿನ 5 ವರ್ಷಗಳಲ್ಲಿ ದೇಶದ ಪ್ರಮುಖ 500 ಕಂಪನಿಗಳಲ್ಲಿ 1 ಕೋಟಿ ಪಾವತಿಸಲ್ಪಟ್ಟ (Paid) ಇಂಟರ್ನ್‌ಷಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
➤ ಪೈಲಟ್ ಹಂತದ ಮೂರು ಆವೃತ್ತಿಗಳು: ರಾಜ್ಯವಾರು ಅಂಕಿ-ಅಂಶಗಳು:
1. ಕೈಗಾರಿಕಾ ರಾಜ್ಯಗಳ ಮುನ್ನಡೆ:
- ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ದೇಶದಲ್ಲೇ ಅತಿ ಹೆಚ್ಚು ಇಂಟರ್ನ್‌ಷಿಪ್ ಅವಕಾಶಗಳನ್ನು ಸೃಷ್ಟಿಸಿ ಮೊದಲ ಮೂರು ಸ್ಥಾನಗಳಲ್ಲಿವೆ.
- ಮೊದಲ ಎರಡು ಆವೃತ್ತಿಗಳಲ್ಲಿ ತಮಿಳುನಾಡು ಒಂದೇ ರಾಜ್ಯದಲ್ಲೇ ತಲಾ 14,000ಕ್ಕೂ ಹೆಚ್ಚು ಇಂಟರ್ನ್‌ಷಿಪ್ ಅವಕಾಶಗಳನ್ನು ಒದಗಿಸಲಾಗಿತ್ತು.
2. ಅಭ್ಯರ್ಥಿಗಳ ಭಾಗವಹಿಸುವಿಕೆಯಲ್ಲಿ ಹಿನ್ನಡೆ:
- ತಮಿಳುನಾಡು: ಮೊದಲ ಆವೃತ್ತಿಯಲ್ಲಿ 82 ಹಾಗೂ ಎರಡನೇ ಆವೃತ್ತಿಯಲ್ಲಿ 59 ಅಭ್ಯರ್ಥಿಗಳು ಮಾತ್ರ ಕೋರ್ಸ್ ಪೂರೈಸಿದ್ದರು.
- ಮಹಾರಾಷ್ಟ್ರ: ಎರಡೂ ಆವೃತ್ತಿಗಳಲ್ಲಿ ತಲಾ 150 ಅಭ್ಯರ್ಥಿಗಳು ಮಾತ್ರ ಪೂರ್ಣಗೊಳಿಸಿದ್ದರು.
➤ ಕಡಿಮೆ ಭಾಗವಹಿಸುವಿಕೆಗೆ ಪ್ರಮುಖ ಕಾರಣಗಳು:
- ಸ್ಥಳೀಯ ಅವಕಾಶಗಳ ಅಭಾವ: ಅಭ್ಯರ್ಥಿಗಳಿಗೆ ತಮ್ಮ ಮನೆಗೆ ಸಮೀಪದಲ್ಲಿ (5-10 ಕಿ.ಮೀ ವ್ಯಾಪ್ತಿಯಲ್ಲಿ) ಇಂಟರ್ನ್‌ಷಿಪ್ ಸಿಗದಿರುವುದು.
- ದೀರ್ಘಾವಧಿ: 12 ತಿಂಗಳ (1 ವರ್ಷ) ಅವಧಿ ಅಭ್ಯರ್ಥಿಗಳಿಗೆ ಸುದೀರ್ಘ ಎನಿಸಿದ್ದು.
- ಆಸಕ್ತಿಯ ಕೊರತೆ ಮತ್ತು ವೆಚ್ಚ: ಸಾರಿಗೆ ಮತ್ತು ಇತರೆ ವೆಚ್ಚಗಳಿಗೆ ಆರಂಭಿಕ ಆರ್ಥಿಕ ಭತ್ಯೆ ಸಾಲದಿರುವುದು.
➤ 2026ರ ಮಾರ್ಚ್ ತಿದ್ದುಪಡಿಗಳು:
- ಅವಧಿಯಲ್ಲಿ ಕಡಿತ: ಆರಂಭದಲ್ಲಿದ್ದ 12 ತಿಂಗಳ (1 ವರ್ಷ) ಇಂಟರ್ನ್‌ಷಿಪ್ ಅವಧಿಯನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ 6 ರಿಂದ 9 ತಿಂಗಳಿಗೆ ಇಳಿಸಲಾಗಿದೆ.
- ಮಾಸಿಕ ಭತ್ಯೆಯಲ್ಲಿ ಹೆಚ್ಚಳ: ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದ ₹5,000 ಮಾಸಿಕ ಭತ್ಯೆಯನ್ನು (Stipend) ಈಗ ₹5,000 ರಿಂದ ₹9,000 ಕ್ಕೆ ಹೆಚ್ಚಿಸಲಾಗಿದೆ.
- ಸೇರ್ಪಡೆಯಲ್ಲಿ ಭಾರಿ ಪ್ರಗತಿ: ಮೊದಲ ಎರಡು ಆವೃತ್ತಿಗಳಲ್ಲಿ ಅಭ್ಯರ್ಥಿಗಳ ಸೇರ್ಪಡೆ ಅತ್ಯಂತ ಕಡಿಮೆಯಿತ್ತಾದರೂ, ಈ ಹೊಸ ಬದಲಾವಣೆಗಳ ನಂತರ 3ನೇ ಆವೃತ್ತಿಯಲ್ಲಿ ಸೇರ್ಪಡೆಯಾದವರ ಸಂಖ್ಯೆ 10,000ಕ್ಕೂ ಗಡಿದಾಟಿದೆ.