* ಫೋರ್ಬ್ಸ್ 400 ಅಮೆರಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ 342 ಶತಕೋಟಿ ಡಾಲರ್‌ಗಳ ಸಂಪತ್ತಿನಿಂದ ಅಗ್ರಸ್ಥಾನ ಪಡೆದಿದ್ದಾರೆ. ಅವರು ಸತತ ನಾಲ್ಕನೇ ವರ್ಷವೂ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
* ಈ ಪಟ್ಟಿಯಲ್ಲಿ ಮಾರ್ಕ್ ಜುಕರ್‌ಬರ್ಗ್ 2ನೇ ಹಾಗೂ ಜೆಫ್ ಬೆಜೊಸ್ 3ನೇ ಸ್ಥಾನ ಗಳಿಸಿದ್ದಾರೆ. ಭಾರತೀಯ ಮೂಲದ ಆರು ಗಣ್ಯರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
* ಅರ್ಚಿ ಅಲ್ಲಿನ್ ಎಮ್ಮರ್ಸನ್ ಸೇರಿ 90 ವರ್ಷ ಮೇಲ್ಪಟ್ಟ 23 ಮಂದಿ ಹಾಗೂ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ 33 ಮಂದಿ ಬಿಲಿಯನೇರ್‌ಗಳಿದ್ದಾರೆ. 42 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹತ್ತು ಶ್ರೀಮಂತರು ಹಾಗೂ ಈ ಬಾರಿಯೂ ನಾಲ್ವರು ಯುವಕರು ಹೊಸದಾಗಿ ಸೇರಿದ್ದಾರೆ.
* ಮಹಿಳಾ ಶ್ರೀಮಂತರಲ್ಲಿ ಆಲಿನ್ ವಾಲ್ಟನ್ (ವಾಲ್‌ಮಾರ್ಟ್ ಸಂಸ್ಥಾಪಕರ ಉತ್ತರಾಧಿಕಾರಿ) ಅಗ್ರಸ್ಥಾನ ಪಡೆದಿದ್ದಾರೆ.
ಭಾರತೀಯ ಮೂಲದ ಅಮೆರಿಕನ್ ಶ್ರೀಮಂತರು
ರ‍್ಯಾಂಕ್ ಹೆಸರು ಉದ್ಯಮ ಸಂಪತ್ತು
($ ಶತಕೋಟಿ)
126 ವಿನೋದ್ ಖೋಸ್ಲಾ ಖೋಸ್ಲಾ ವೆಂಚರ್ಸ್ 9.9
246 ಬೈಜು ಭಟ್ ರಾಬಿನ್ ಹುಡ್ ಅಪ್ಲಿಕೇಶನ್ 6
255 ರಾಕೇಶ್ ಗಂಗ್ವಾಲ್ ವಾಯುಯಾನ ಸಂಸ್ಥೆ 5.9
261 ಜಯಶ್ರೀ ಉಳ್ಳಾಲ ಅರಿಷ್ಟಾ ಸಿಇಒ 5.8
352 ಸಂಜಿತ್ ಬಿಸ್ವಾಸ್ ಸೆನ್ಸಾರ್ ಸಿಸ್ಟಮ್ಸ್ 4.2
352 ರಾಜೀವ್ ಜೈನ್ ಜಿಕ್ಯೂಜಿ ಪಾರ್ಟನರ್ಸ್ 4.2
ಶುಕ್ರವಾರ, 12 ಸೆಪ್ಟೆಂಬರ್ 2025
12:23 ಅಪರಾಹ್ನ
Daily PDF
ಫೋರ್ಬ್ಸ್ 400: ಎಲಾನ್ ಮಸ್ಕ್ ನಾಲ್ಕನೇ ಬಾರಿ ಅಗ್ರಸ್ಥಾನ, ಭಾರತೀಯ ಮೂಲದ ಆರು ಮಂದಿ ಪಟ್ಟಿಯಲ್ಲಿ
Authored by:
Jyoti Angadi