➤ ಭಾರತದ ಪ್ರಮುಖ ಡಿಜಿಟಲ್ ಪಾವತಿ ಆಪ್ ಆಗಿರುವ ಫೋನ್ ಪೇ (PhonePe), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಸಹಯೋಗದೊಂದಿಗೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಡಿಜಿಟಲ್ ಬಳಕೆದಾರರಿಗಾಗಿ 'ತತ್ಕಾಲ್ NPS' (Tatkal NPS) ಸೇವೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಮೂಲಕ ಇನ್ನು ಮುಂದೆ ಯಾರು ಬೇಕಾದರೂ ಕೇವಲ ₹250 ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ಅತ್ಯಂತ ಸುಲಭವಾಗಿ ತೆರೆಯಬಹುದು.
➤ 'ತತ್ಕಾಲ್ NPS' : 

  1. ಹೊಸ ಕೆವೈಸಿ (KYC) ಅಗತ್ಯವಿಲ್ಲ: ಈ ಸೇವೆಯ ವಿಶೇಷತೆಯೆಂದರೆ, ಬಳಕೆದಾರರು ಯಾವುದೇ ಹೊಸ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಥವಾ ಪ್ರತ್ಯೇಕವಾಗಿ ಕೆವೈಸಿ (KYC) ಪ್ರಕ್ರಿಯೆ ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಈಗಾಗಲೇ ಇರುವ ಕೆವೈಸಿ ವಿವರಗಳನ್ನೇ ಇದರೊಂದಿಗೆ ಜೋಡಿಸಲಾಗುತ್ತದೆ.
  2. ಕೇವಲ ₹250 ರೂ. ಹೂಡಿಕೆ: ಸಾಂಪ್ರದಾಯಿಕ ವಿಧಾನಗಳಂತೆ ಹೆಚ್ಚು ಹಣ ಪಾವತಿಸಿ ಪಿಂಚಣಿ ಖಾತೆ ತೆರೆಯುವ ಬದಲು, ಕೇವಲ ₹250 ರೂ. ಪಾವತಿಸಿ ನಿಮ್ಮ ನಿವೃತ್ತಿ ಉಳಿತಾಯ ಯೋಜನೆಗೆ ಮುನ್ನುಡಿ ಬರೆಯಬಹುದು.
  3. ತಕ್ಷಣವೇ PRAN ಸಂಖ್ಯೆ ಲಭ್ಯ: ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ PRAN (Permanent Retirement Account Number) ಅಂದರೆ ಖಾಯಂ ನಿವೃತ್ತಿ ಖಾತೆ ಸಂಖ್ಯೆ ತಕ್ಷಣವೇ ಜನರೇಟ್ ಆಗುತ್ತದೆ.
  4. ಒಟಿಪಿ (OTP) ಆಧಾರಿತ ದೃಢೀಕರಣ: ಸಂಪೂರ್ಣ ಪ್ರಕ್ರಿಯೆಯು ಕಾಗದರಹಿತವಾಗಿದ್ದು (Paperless), ಬ್ಯಾಂಕ್ ಒಟಿಪಿ (OTP) ಮೂಲಕ ಸುರಕ್ಷಿತವಾಗಿ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತದೆ.

➤ ನಿವೃತ್ತಿ ವೇತನ ಅಥವಾ ಪಿಂಚಣಿ ಸೌಲಭ್ಯವಿಲ್ಲದ ಅಸಂಘಟಿತ ವಲಯದ ಕಾರ್ಮಿಕರು, ಗಗ್ ವ್ಕರ್ಸ್ (Gig Workers), ಸ್ವಯಂ ಉದ್ಯೋಗಿಗಳು (Freelancers), ಸಣ್ಣ ವ್ಯಾಪಾರಿಗಳು ಹಾಗೂ ಮೊದಲ ಬಾರಿಗೆ ಹೂಡಿಕೆ ಮಾಡಲು ಮುಂದಾಗುವ ಯುವಜನರಿಗೆ (Gen-Z & Millennials) ಈ 'ತತ್ಕಾಲ್ NPS' ವರದಾನವಾಗಲಿದೆ. ಇದು ದೇಶದ ಯುವ ಸಮುದಾಯದಲ್ಲಿ ನಿವೃತ್ತಿ ಯೋಜನೆ ಮತ್ತು ದೀರ್ಘಕಾಲೀನ ಉಳಿತಾಯದ ಅಭ್ಯಾಸವನ್ನು ಬೆಳೆಸಲು ನೆರವಾಗುತ್ತದೆ.