* ಸರಕುಗಳಲ್ಲಿ ಭಾರತ-ಆಸಿಯಾನ್ ಮುಕ್ತ ವ್ಯಾಪಾರ ಒಪ್ಪಂದದ ಪರಿಶೀಲನಾ ಸಭೆಯ ಮುಂದಿನ ಸುತ್ತಿನ ಮಾತುಕತೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
* ಇದೇ ತಿಂಗಳಿನಲ್ಲಿ ನಾಲ್ಕನೇ ಸುತ್ತಿನ ಸಮಾಲೋಚನೆಯು ಮುಕ್ತಾಯಗೊಂಡಿದೆ.
* ಈ ಒಪ್ಪಂದವು ಸುಸ್ಥಿರ ಮಾದರಿಯಲ್ಲಿ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಹಿವಾಟು ನಡೆಸಲು ನೆರವಾಗಲಿದೆ ಎಂದು ಹೇಳಿದೆ.
* AITIGA (Asean India Trade in Goods Agreement) ಯ ಪರಿಶೀಲನೆಯು ASEAN ಪ್ರದೇಶದೊಂದಿಗೆ ಸುಸ್ಥಿರ ರೀತಿಯಲ್ಲಿ ವ್ಯಾಪಾರವನ್ನು ಹೆಚ್ಚಿಸುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
* ಸರಕುಗಳಿಗೆ ಸಂಬಂಧಿಸಿದ ಆಸಿಯಾನ್ ಇಂಡಿಯಾ ವ್ಯಾಪಾರದ ಜಂಟಿ ಸಮಿತಿಯಡಿ ಎಂಟು ಉಪ ಸಮಿತಿಗಳನ್ನು ರಚಿಸಲಾಗಿದೆ. ಮಾರುಕಟ್ಟೆಯ ಲಭ್ಯತೆ, ನಿಯಮಾವಳಿ, ತಾಂತ್ರಿಕ ನಿಯಮ, ಕಸ್ಟಮ್, ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ಕಾನೂನು ಹಾಗೂ ಸಾಂಸ್ಥಿಕ ನಿಬಂಧನೆಗಳ ಬಗ್ಗೆ ಈ ಸಮಿತಿಗಳು ಚರ್ಚಿಸಲಿವೆ.
* ಭಾರತದ ಜಾಗತಿಕ ವ್ಯಾಪಾರದಲ್ಲಿ ಸುಮಾರು 11 ಪ್ರತಿಶತ ಪಾಲನ್ನು ಹೊಂದಿರುವ ಆಸಿಯಾನ್ ಒಂದು ಗುಂಪಿನಂತೆ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ.
* ಆಸಿಯಾನ್ ಸದಸ್ಯರಲ್ಲಿ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿವೆ.
ಶನಿವಾರ, 23 ನವೆಂಬರ್ 2024
5:38 ಅಪರಾಹ್ನ
Daily PDF
ಫೆಬ್ರವರಿ 2025ರಲ್ಲಿ ಭಾರತ-ಆಸಿಯಾನ್ ವ್ಯಾಪಾರ ಒಪ್ಪಂದದ ಚರ್ಚೆ
Authored by:
Jyoti Angadi