* ಹೊಸ ಜಾಗತಿಕ ವಾಣಿಜ್ಯ ನಿಯಮಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ವಿಶ್ವ ವ್ಯಾಪಾರ ಸಂಘಟನೆಯ 13 ನೆ ಸಚಿವರ ಸಭೆ ಯುನೈಟೆಡ್ ಎಮಿರೇಟ್ಸ್ ನ (UAE) ಅಬುಧಾಬಿಯಲ್ಲಿ ಫೆಬ್ರುವರಿ 26 ರಂದು (ಸೋಮವಾರ) ಪ್ರಾರಂಭವಾಗಿದೆ.
* ಭಾರತೀಯ ನಿಯೋಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನೇತೃತ್ವವನ್ನು ವಹಿಸಲಿದ್ದಾರೆ .
* ವಿಶ್ವ ವ್ಯಾಪಾರ ಸಂಘಟನಾ ಸಂಸ್ಥೆಯ 164 ಸದಸ್ಯರಿಂದ ವ್ಯಾಪಾರ ಮಂತ್ರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸುವ ವಿಶ್ವ ವ್ಯಾಪಾರ ಸಂಘಟನೆಯ (WTO) ಮಂತ್ರಿ ಸಮ್ಮೇಳನವು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ವಿಶ್ವ ವ್ಯಾಪಾರ ಸಂಘಟನೆಯ ಸ್ಥಾಪಿಸುವ ಮಾರಕೇಶ್ ಒಪ್ಪಂದದ ಅಡಿಯಲ್ಲಿ ಮಂತ್ರಿಗಳ ಸಮ್ಮೇಳನವು ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸಭೆ ಸೇರಬೇಕು.
ಫೆಬ್ರುವರಿ 25 ರಂದು : ಅಬುಧಾಬಿಯಲ್ಲಿ 13 ನೇ WTO ಸಚಿವರ ಸಮ್ಮೇಳನ ಪ್ರಾರಂಭ
Published by Bhagya R K
26 ಫೆಬ್ರವರಿ 2024