* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೊ ಕೊಲ್ಲಿಯ ಮರುನಾಮಕರಣಕ್ಕಾಗಿ ಇತ್ತೀಚಿಗೆ ಕಾರ್ಯಕಾರಿ ಆದೇಶವನ್ನು ಹೊರಡಿಸಿದ್ದು, ಫೆ.9ನ್ನು ಮೊದಲ ‘ಗಲ್ಫ್ ಆಫ್ ಅಮೆರಿಕ ಡೇ(ಅಮೆರಿಕ ಕೊಲ್ಲಿ ದಿನ)’ ಎಂಬ ಘೋಷಣೆಗೆ ಸಹಿ ಹಾಕಿದ್ದಾರೆ.
* ಗಲ್ಫ್ ಆಫ್ ಮೆಕ್ಸಿಕೊದ ಹೆಸರನ್ನು ಟ್ರಂಪ್ ಅಧ್ಯಕ್ಷರಾದ ಬಳಿಕ ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಲಾಗಿದೆ.
* ಟ್ರಂಪ್ ಸೂಪರ್‌ಬೌಲ್‌ಗೆ ಏರ್‌ಫೋರ್ಸ್ ಒನ್‌ನಲ್ಲಿ ತೆರಳುತ್ತಿದ್ದಾಗ ಘೋಷಣೆಗೆ ಸಹಿ ಹಾಕಿದರು. ನ್ಯೂ ಒರ್ಲಿಯನ್ಸ್ ಕೊಲ್ಲಿ ಪ್ರದೇಶದಲ್ಲಿದ್ದು, ಘೋಷಣೆಗೆ ಇದು ಸೂಕ್ತ ಸಮಯವೆಂದರು. ಮರುನಾಮಕರಣದ ಬಳಿಕ ಇದು ಗಲ್ಫ್ ಆಫ್ ಅಮೆರಿಕಕ್ಕೆ ಅವರ ಮೊದಲ ಭೇಟಿಯಾಗಿದೆ ಎಂದು ಶ್ವೇತಭವನ ಪ್ರಕಟಿಸಿತು.
* ಜ.20ರಂದು ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರವಹಿಸಿಕೊಂಡ ಬಳಿಕ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಗಲ್ಫ್ ಆಫ್ ಮೆಕ್ಸಿಕೊ ಹೆಸರನ್ನು ಗಲ್ಫ್ ಆಫ್ ಅಮೆರಿಕ ಎಂದು ಬದಲಾಯಿಸುವುದು ಕೂಡ ಒಂದಾಗಿತ್ತು.
ಫೆ.9ನ್ನು ‘ಗಲ್ಫ್ ಆಫ್ ಅಮೆರಿಕ ದಿನ’ ಎಂದು ಘೋಷಿಸಿದ ಡೊನಾಲ್ಡ್ ಟ್ರಂಪ್
Published by Jyoti Angadi
11 ಫೆಬ್ರವರಿ 2025