➤ ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ, ಪಾಕಿಸ್ತಾನ ಮತ್ತು ಚೀನಾ ದೇಶಗಳು ತಮ್ಮ ಜಂಟಿ ಗಡಿ ಆಯೋಗದ (Boundary Joint Commission - BJC) ಕಾರ್ಯಾಚರಣೆಯನ್ನು ಅಧಿಕೃತವಾಗಿ ಆರಂಭಿಸಿವೆ. ಭಾರತೀಯ ಭೂಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರ (PoK) ಹಾಗೂ ಶ್ಯಾಕ್ಸ್ಗಮ್ ಕಣಿವೆ ಪ್ರದೇಶಗಳನ್ನು ಒಳಗೊಂಡಿರುವ ಈ ಒಪ್ಪಂದವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಯಾವುದೇ ಕಾನೂನುಬದ್ಧತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
- ಜಂಟಿ ಗಡಿ ಆಯೋಗದ ಉದ್ದೇಶ: 2013ರ ಚೀನಾ-ಪಾಕಿಸ್ತಾನ ಗಡಿ ನಿರ್ವಹಣಾ ಒಪ್ಪಂದದಡಿ ಸ್ಥಾಪಿತವಾಗಿರುವ ಈ ಆಯೋಗವು, ಗಡಿ ಸಮೀಕ್ಷೆ ಹಾಗೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಗಡಿ ನಿರ್ವಹಣೆಯನ್ನು ಸುಲಭಗೊಳಿಸುವ ಗುರಿ ಹೊಂದಿದೆ.
- ಭಾರತದ ತೀವ್ರ ಖಂಡನೆ: ಪಾಕ್ ಆಕ್ರಮಿತ ಕಾಶ್ಮೀರ (PoK) ಭಾರತದ ಅವಿಭಾಜ್ಯ ಅಂಗ. ಅಕ್ರಮವಾಗಿ ಭೂಮಿ ವಶಪಡಿಸಿಕೊಂಡಿರುವ ಪಾಕಿಸ್ತಾನಕ್ಕೆ ಈ ಪ್ರದೇಶದ ಕುರಿತು ಯಾವುದೇ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳುವ ಕಾನೂನುಬದ್ಧ ಹಕ್ಕು (Locus Standi) ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
- 1963ರ ಗಡಿ ಒಪ್ಪಂದ: 1963ರಲ್ಲಿ ಪಾಕಿಸ್ತಾನವು ಭಾರತಕ್ಕೆ ಸೇರಿದ ಶಾಕ್ಸ್ಗಮ್ ಕಣಿವೆಯ 5,180 ಚದರ ಕಿ.ಮೀ. ಭೂಪ್ರದೇಶವನ್ನು ಅಕ್ರಮವಾಗಿ ಚೀನಾಕ್ಕೆ ನೀಡಿತು. ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು.
- ಅಕ್ಸಾಯ್ ಚಿನ್ ವ್ಯಾಪ್ತಿ: ಚೀನಾ ಪ್ರಸ್ತುತ ಲಡಾಖ್ನ ಸುಮಾರು 38,000 ಚದರ ಕಿ.ಮೀ. ಅಕ್ಸಾಯ್ ಚಿನ್ ಪ್ರದೇಶವನ್ನು ಕಾನೂನುಬಾಹಿರವಾಗಿ ತನ್ನ ವಶದಲ್ಲಿಟ್ಟುಕೊಂಡಿದೆ.