* ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವನ್ನು ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂದು ಘೋಷಿಸಿದ್ದಾರೆ. ಅವರು ಯೋಗದ ಮಹತ್ವವನ್ನು ಪ್ರತಿಪಾದಿಸಿ, ಫಿಟ್‌ನೆಸ್ ಜೊತೆಗೆ ಯೋಗದ ಅಭ್ಯಾಸಕ್ಕೂ ಒತ್ತು ನೀಡಿದ್ದಾರೆ.
* ಹಿನ್ನಲೆ : 2014ರಲ್ಲಿ ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅನುಮೋದನೆ ನೀಡಿದ್ದು, 2015ರ ಜೂನ್ 21ರಂದು ಪ್ರಥಮ ಬಾರಿಗೆ ಆಚರಣೆ ಮಾಡಲಾಯಿತು. ಜೂನ್ 21 ಸುದೀರ್ಘ ಹಗಲು ಇರುವ ದಿನವಾಗಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ.
* ಮಹತ್ವ : ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಯೋಗಾಭ್ಯಾಸದಿಂದ ರಕ್ತಪರಿಚಲನೆ, ಜೀರ್ಣಕ್ರಿಯೆ ಸುಧಾರಣೆ, ಒತ್ತಡ ನಿರ್ವಹಣೆ ಮತ್ತು ಉತ್ತಮ ನಿದ್ರೆ ಸಾಧ್ಯವಾಗುತ್ತದೆ. ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಅಥವಾ ಪ್ರವಾಸದಲ್ಲಿ ಸರಳ ಯೋಗ ಭಂಗಿಗಳನ್ನು ಮಾಡುವುದು ಆರೋಗ್ಯ ಸುಸ್ಥಿರವಾಗಲು ನೆರವಾಗುತ್ತದೆ.
ಮಂಗಳವಾರ, 01 ಎಪ್ರಿಲ್ 2025
1:18 ಅಪರಾಹ್ನ
Daily PDF
" ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ": ಯೋಗ ದಿನದ ಧ್ಯೇಯವಾಕ್ಯ ಘೋಷಿಸಿದ ಮೋದಿ
Authored by:
Jyoti Angadi