* ಸ್ವಿಟ್ಜರ್ಲೆಂಡ್ "ಸಾರ್ಕೊ" ಎಂಬ ಹೆಸರಿನ 'ಆತ್ಮಹತ್ಯೆ ಯಂತ್ರ'ವನ್ನು ಕಾನೂನುಬದ್ಧಗೊಳಿಸಿದೆ. ಇದು ಬಳಕೆದಾರರು ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾ (ಅಂಗಾಂಶ ಮಟ್ಟದಲ್ಲಿ ಅಸಮರ್ಪಕ ಆಮ್ಲಜನಕದ ಪೂರೈಕೆಯ ಸ್ಥಿತಿ ಮತ್ತು ಸಾವಿಗೆ ಕಾರಣವಾಗುವ ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡುವ ಮೂಲಕ) ತುಲನಾತ್ಮಕವಾಗಿ ನೋವುರಹಿತವಾಗಿ ತಮ್ಮನ್ನು ಕೊಲ್ಲಲು ಅನುವು ಮಾಡಿಕೊಡುತ್ತದೆ.
* 'ಸಾರ್ಕೊ ಕ್ಯಾಪ್ಸುಲ್' ಎಂದು ಕರೆಯಲ್ಪಡುವ ಸಾಧನವನ್ನು 2019 ರಲ್ಲಿ ಪರಿಚಯಿಸಲಾಯಿತು, ಆದರೆ ಇದೀಗ ಅತ್ಯಾಧುನಿಕ ಅಪ್ ಡೇಟ್ ನೊಂದಿಗೆ ಈ ಯಂತ್ರ ಬಳಕೆಗೆ ಸಿದ್ಧವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
* ಈ ಯಂತ್ರವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡವರು ಯಾವುದೇ ನೋವು ಅನುಭವಿಸದೇ ಸಾಯುತ್ತಾರೆ. ಈ ಯಂತ್ರವು ಆತ್ಮಹತ್ಯೆಗಾಗಿ ಬರುವ ವ್ಯಕ್ತಿ ಬಟನ್ ಒತ್ತಿದ ಕೂಡಲೇ ಆತನಿಗೆ ಆಕ್ಸಿಜನ್ ಬದಲಿಗೆ ನೈಟ್ರೋಜನ್ ಬಿಡುಗಡೆ ಮಾಡುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣಬಿಡುತ್ತಾನೆ ಎಂದು ಹೇಳಲಾಗಿದೆ.
* ಸಾರ್ಕೊ ಕ್ಯಾಪ್ಸುಲ್ ಅನ್ನು ಬಳಸುವ ವೆಚ್ಚ $ 20 ಆಗಿದೆ. ಈ ಆತ್ಮಹತ್ಯಾ ಪಾಡ್ ಅನ್ನು ಸ್ವಿಟ್ಜರ್ಲೆಂಡ್ ನ ”ದಿ ಲಾಸ್ಟ್ ರೆಸಾರ್ಟ್” ಸಂಸ್ಥೆ ಆವಿಷ್ಕರಿಸಿದೆ. ಸ್ವಿಟ್ಜರ್ಲೆಂಡ್ ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಈ ವರೆಗೂ ಈ ಸಂಸ್ಥೆ ಸೇವೆಗೆ ಯಾವುದೇ ರೀತಿಯ ಕಾನೂನು ತೊಡಕು ಉಂಟಾಗಿಲ್ಲ.
ಸೋಮವಾರ, 22 ಜುಲೈ 2024
12:34 ಅಪರಾಹ್ನ
Daily PDF
ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ ಆವಿಷ್ಕರಿಸಿದ ಸ್ವಿಟ್ಜರ್ಲೆಂಡ್
Authored by:
Jyoti Angadi