* ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮೊದಲ ಪುರುಷ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
* ಆಗಸ್ಟ್ 2 ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷ್ಯ ಅವರು 19 21, 21-15, 21-12ರಿಂದ ಚೈನಿಸ್ ತೃಪೆಯ ಚೌ ಟೀನ್ ಚೆನ್ ಅವರ ವಿರುದ್ಧ ರೋಚಕ ಜಯ ಸಾಧಿಸಿದರು.
* ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಅವರು ಮಾತ್ರ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ವಿಭಾಗದಲ್ಲಿ ಈ ಹಿಂದೆ ಪರುಪಳ್ಳಿ ಕಶ್ಯಪ್ ಮತ್ತು ಕೆ. ಶ್ರೀಕಾಂತ್ ಅವರು ಎಂಟರ ಘಟ್ಟ ತಲುಪಿದ್ದರು.
* ಲಕ್ಷ್ಯ ಸೇನ್ ಎರಡನೇ ಗೇಮ್ ನಲ್ಲಿ ಆರು ಅಂಕಗಳ ಅಂತರದಿಂದ ಗೆದ್ದು 1-1ರ ಸಮಬಲ ಸಾಧಿಸಿದರು. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಲಕ್ಷ್ಯ ಕೊನೆಯ ಮತ್ತು ನಿರ್ಣಾಯಕ ಹಂತದಲ್ಲಿ ಚುರುಕಾದ ಆಟವಾಡಿದರು.
* 22 ವರ್ಷದ ಲಕ್ಷ್ಯ ಸೇನ್ ಅವರು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2021ರಲ್ಲಿ ಅವರು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ, ಎರಡು ವರ್ಷಗಳ ಹಿಂದೆ ಥಾಮಸ್ ಕಪ್ ಮತ್ತುಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಒಲಿಂಪಿಕ್ನಲ್ಲಿ ಸೆಮಿಫೈನಲ್ ತಲುಪಿ ಹೊಸ ಇತಿಹಾಸ ಬರೆದ ಲಕ್ಷ್ಯ ಸೇನ್
Published by Jyoti Angadi
03 ಆಗಸ್ಟ್ 2024