* ಅಮೆರಿಕದ ಅತಿದೊಡ್ಡ ನಗರವಾಗಿರುವ ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡುವ ಐತಿಹಾಸಿಕ ವಿಧೇಯಕಕ್ಕೆ ಗವರ್ನರ್ ಕ್ಯಾಥಿ ಹೋಚುಲ್ ಅವರು ಅಂಕಿತ ಹಾಕಿದ್ದಾರೆ.
* ನಗರದಲ್ಲಿ ವಿವಿಧ ಧರ್ಮದ ಜನರು ನೆಲೆಸಿದ್ದಾರೆ. ವೈವಿಧ್ಯಮಯ ಸಂಸ್ಕೃತಿಯನ್ನು ಗುರುತಿಸುವ ಸಲುವಾಗಿ ನಾವು ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ.
* ಈ ರಜೆಯಿಂದ ಜಗತ್ತಿನಾದ್ಯಂತ ಇರುವ ಸಂಪ್ರದಾಯಗಳನ್ನು ಆಚರಿಸಲು ನಮ್ಮ ಮಕ್ಕಳಿಗೆ ಅವಕಾಶ ಸಿಗಲಿದೆ ಎಂದು ಹೋಚುಲ್ ಹೇಳಿದ್ದಾರೆ.
* ದೀಪಾವಳಿ ದಿನದಂದು ಶಾಲೆಗಳಿಗೆ ರಜೆ ನೀಡಬೇಕು ಎಂದು ಕೋರಿ ವಿಧೇಯಕ ಮಂಡಿಸಿದ್ದ ಭಾರತ ಮೂಲದ ನ್ಯೂಯಾರ್ಕ್ ಸಂಸದೆ ಜೆನ್ನಿಫರ್ ರಾಜಕುಮಾರ್ ಅವರು ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದರು.
ಗುರುವಾರ, 16 ನವೆಂಬರ್ 2023
10:33 ಪೂರ್ವಾಹ್ನ
Daily PDF
ನ್ಯೂಯಾರ್ಕ್ : ದೀಪಾವಳಿಗೆ ಸಾರ್ವತ್ರಿಕ ರಜೆ
Authored by:
Tajabi Pathan