* ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಅಲ್ಟನೀಸ್ ಜಿ-20 ಶೃಂಗಸಭೆ ವೇಳೆ ಮಾತುಕತೆ ನಡೆಸಿ, ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಮ್ಮತಿಸಿದ್ದಾರೆ.
* ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರು ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 2ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯನ್ನು ನಡೆಸಿದರು.
* ಭಾರತ ಮತ್ತು ಆಸ್ಟ್ರೇಲಿಯಾ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪಾಲುಗಾರಿಕೆ ಕುರಿತು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
* ಅಲ್ಲದೆ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಶಿಕ್ಷಣ, ಕೌಶಲ್ಯ ಮತ್ತು ಚಲನಶೀಲತೆ, ಬಾಹ್ಯಾಕಾಶ, ಕ್ರೀಡೆ ಮತ್ತು ಜನರ ನಡುವಿನ ಸಂಬಂಧಗಳಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
* 'ಮೇಕ್ ಇನ್ ಇಂಡಿಯಾ ಮತ್ತು ಪ್ಯೂಚರ್ ಮೇಡ್ ಇನ್ ಆಸ್ಟ್ರೇಲಿಯಾ' ಕಾರ್ಯಕ್ರಮಗಳು ಪರಸ್ಪರ ಪೂರಕವಾಗಿದ್ದು.
* ಉದ್ಯೋಗಾವಕಾಶ ಸೃಷ್ಟಿ, ಆರ್ಥಿಕ ಪ್ರಗತಿಗೆ ನೆರವಾಗಲಿವೆ ಎಂಬುದಾಗಿ ಉಭಯ ನಾಯಕರು ಅಭಿಪ್ರಾಯಪಟ್ಟರು ಎಂದು ಜಂಟಿ ಪ್ರಕಟಣೆ ತಿಳಿಸಿದೆ.
* ಸೌರಶಕ್ತಿ, ಹಸಿರು ಜಲಜನಕ ಹೊಸ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಹೂಡಿಕೆ ಸೇರಿದಂತೆ ಅನೇಕ ಆದ್ಯತಾ ವಲಯಗಳಲ್ಲಿ ಸಹಕಾರ ಕುರಿತು ನವೀಕರಿಸಬಹುದಾದ ಇಂಧನ ಪಾಲುಗಾರಿಕೆ (REP) ಚೌಕಟ್ಟು ಒದಗಿಸಲಿದೆ.
ಶುಕ್ರವಾರ, 22 ನವೆಂಬರ್ 2024
5:21 ಅಪರಾಹ್ನ
Daily PDF
ನವೀಕರಿಸಲಾದ ಇಂಧನ ಪಾಲುಗಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಆಸ್ಟ್ರೇಲಿಯಾ
Authored by:
Jyoti Angadi