* 2025ರ ಸೆಪ್ಟೆಂಬರ್ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಜ್ಞಾನ ಭಾರತಂ ಸಮ್ಮೇಳನದಲ್ಲಿ ಜ್ಞಾನ ಭಾರತಂ ಪೋರ್ಟಲ್ ಅನ್ನು ಉದ್ಘಾಟಿಸಿದರು.
* ಪುರಾತನ ಪಾಣ್ಡುಲಿಪಿಗಳ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಸಾರ್ವಜನಿಕ ಪ್ರವೇಶಕ್ಕಾಗಿ ಇದು ರಾಷ್ಟ್ರೀಯ ಡಿಜಿಟಲ್ ವೇದಿಕೆಯಾಗಿದೆ.
* ಪೋರ್ಟಲ್ ಮೂಲಕ ಪಾಣ್ಡುಲಿಪಿಗಳ ಗುರುತಿಸುವಿಕೆ, ದಾಖಲೆ, ಡಿಜಿಟಲೀಕರಣ ಮತ್ತು ಸಂರಕ್ಷಣೆ ನಡೆಯಲಿದೆ. ವಿದ್ವಾಂಸರಿಗೂ ಸಾರ್ವಜನಿಕರಿಗೂ ಲಭ್ಯವಾಗುವ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಗುರಿಯಾಗಿದೆ.
* AI ಆಧಾರಿತ ಹುಡುಕಾಟ, ಅನುವಾದ, ಟೀಕ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಶೋಧನೆ, ಪ್ರಕಾಶನ ಮತ್ತು ಪಾಂಡು ಲಿಪಿ (Manuscript) ಸಂರಕ್ಷಣಾ ತರಬೇತಿಗೆ ಇದು ಬೆಂಬಲ ಒದಗಿಸುತ್ತದೆ.
* “ಪಾಂಡು ಲಿಪಿ (Manuscript) ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಮರುಸ್ವೀಕರಿಸುವುದು” ಎಂಬ ವಿಷಯದ ಮೇಲೆ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಯಿತು.
* ಭಾರತ ಹಾಗೂ ವಿದೇಶಗಳಿಂದ 1,100 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ಡಿಜಿಟಲೀಕರಣ ಮತ್ತು ಸಂರಕ್ಷಣೆ ಕುರಿತ ಚರ್ಚೆ, ಆಲೋಚನೆ ವಿನಿಮಯ ನಡೆಸಿದರು.
* ಭಾರತವು ವಿಶ್ವದಲ್ಲೇ ಅತಿ ದೊಡ್ಡ ಪಾಣ್ಡುಲಿಪಿ ಸಂಗ್ರಹವನ್ನು ಹೊಂದಿದೆ. ಅವುಗಳಲ್ಲಿ ದಾರ್ಶನಿಕತೆ, ವೈದ್ಯಶಾಸ್ತ್ರ, ಖಗೋಳಶಾಸ್ತ್ರ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳ ಜ್ಞಾನ ಅಡಕವಾಗಿದೆ.
* ಅವು ನಾಶವಾಗುವ ಅಪಾಯದಲ್ಲಿರುವುದರಿಂದ ಡಿಜಿಟಲೀಕರಣ ತುರ್ತು ಅಗತ್ಯವಾಗಿದೆ. ಯೋಜನೆ ಭವಿಷ್ಯದ ತಲೆಮಾರುಗಳಿಗೆ ಸಂರಕ್ಷಣೆ ಒದಗಿಸುವುದರ ಜೊತೆಗೆ NEP 2020 ಗುರಿಗಳೊಂದಿಗೆ ಹೊಂದಿಕೊಂಡಿದೆ.
* ಜ್ಞಾನ ಭಾರತಂ ಪೋರ್ಟಲ್ ಕೇವಲ ಸಂರಕ್ಷಣೆಗಾಗಿ ಅಲ್ಲ, ಪುರಾತನ ಜ್ಞಾನವನ್ನು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಕೊಂಡೊಯ್ಯುವ ಸೇತುವೆಯಾಗಿದೆ.
* AI ಆಧಾರಿತ ಸಾಧನಗಳು, ಜಾಗತಿಕ ಸಹಯೋಗ ಮತ್ತು ಡಿಜಿಟಲ್ ಲಭ್ಯತೆ ಮೂಲಕ ಇದು ಭಾರತದ ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಜಾಗತಿಕ ಸಾಫ್ಟ್ ಪವರ್ ತಂತ್ರವನ್ನು ಬಲಪಡಿಸುತ್ತದೆ.
ನವದೆಹಲಿಯಲ್ಲಿ ಪ್ರಧಾನಿ ಮೋದಿ 'ಜ್ಞಾನ ಭಾರತಂ ಪೋರ್ಟಲ್' ಉದ್ಘಾಟನೆ
Published by Jyoti Angadi
13 ಸೆಪ್ಟೆಂಬರ್ 2025