➤ ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಸಣ್ಣ ವ್ಯಾಪಾರಿಗಳಲ್ಲಿ ಯುಪಿಐ (UPI) ಬಳಕೆಯನ್ನು ಜನಪ್ರಿಯಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ 'ಯುಪಿಐ ವ್ಯಾಪಾರ ಸಕ್ಷಮ್ ಯೋಜನೆ' (UPI Vyapaar Saksham Scheme)ಯನ್ನು ಪರಿಚಯಿಸಿದೆ. ಈ ಯೋಜನೆಯು ದೇಶದ ಮೂಲೆ ಮೂಲೆಗಳಲ್ಲಿರುವ ಸಣ್ಣ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ಮತ್ತು ಚಿಲ್ಲರೆ ಅಂಗಡಿಕಾರರಿಗೆ ಡಿಜಿಟಲ್ ಪಾವತಿ ಸಾಧನಗಳನ್ನು ತಲುಪಿಸುವ ಗುರಿ ಹೊಂದಿದೆ.
➤ QR ಕೋಡ್ ಮತ್ತು ಸೌಂಡ್‌ಬಾಕ್ಸ್ ಪ್ರೋತ್ಸಾಹಕಗಳು: ಹೊಸ ಸಣ್ಣ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ಸೇರಿಸುವ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರತಿ ಹೊಸ ಭೌತಿಕ ಕ್ಯೂಆರ್ ಕೋಡ್‌ಗೆ (QR Code) ₹300 ಹಾಗೂ ಧ್ವನಿ ಆಧಾರಿತ ಎಚ್ಚರಿಕೆ ನೀಡುವ ಸೌಂಡ್‌ಬಾಫ್‌ಗಳಿಗೆ (Soundbox) ₹750 ವರೆಗೆ ಪ್ರೋತ್ಸಾಹಧನ ಲಭ್ಯವಿರುತ್ತದೆ.
➤ ಅರ್ಹತಾ ಮಾನದಂಡಗಳು: ಕಳೆದ ಹಣಕಾಸು ವರ್ಷದಲ್ಲಿ ವಾರ್ಷಿಕ ₹40 ಲಕ್ಷದವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇದರೊಂದಿಗೆ ಪಿಎಂ ಸ್ವನಿಧಿ (PM SVANidhi) ಮತ್ತು ಪಿಎಂ ವಿಶ್ವಕರ್ಮ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.
➤ ಭೌಗೋಳಿಕ ಆದ್ಯತೆ: ಟೈರ್-3 ರಿಂದ ಟೈರ್-6 ನಗರಗಳು, ಈಶಾನ್ಯ ರಾಜ್ಯಗಳು (Northeast states) ಹಾಗೂ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಯನ್ನು ತಳಮಟ್ಟದಿಂದ ವಿಸ್ತರಿಸಲು ವಿಶೇಷ ಗಮನ ಹರಿಸಲಾಗಿದೆ.
➤ ಯೋಜನೆಯ ನಿಧಿ ಹಂಚಿಕೆ ಮತ್ತು ವಿಭಾಗಗಳು: ಈ ಯೋಜನೆಯನ್ನು ಮೂರು ಪ್ರಮುಖ ಘಟಕಗಳಾಗಿ ವಿಂಗಡಿಸಲಾಗಿದೆ:
1. ಹೊಸ ವ್ಯಾಪಾರಿಗಳ ಸೇರ್ಪಡೆ (30% ನಿಧಿ): ಹೊಸದಾಗಿ ಕ್ಯೂಆರ್ ಕೋಡ್ ಮತ್ತು ಸೌಂಡ್‌ಬಾಕ್ಸ್ ಅಳವಡಿಕೆ.
2. ವಹಿವಾಟು ಬೆಳವಣಿಗೆ (50% ನಿಧಿ): ವ್ಯಾಪಾರಿಗಳು ನಿರಂತರವಾಗಿ ಯುಪಿಐ ವಹಿವಾಟು ನಡೆಸುವುದನ್ನು ಉತ್ತೇಜಿಸುವುದು.
3. ಹೆಚ್ಚುವರಿ ವಹಿವಾಟು ಪ್ರಗತಿ (20% ನಿಧಿ): ನಿಗದಿತ ಪ್ರದೇಶಗಳಲ್ಲಿ ವಹಿವಾಟಿನ ಮೌಲ್ಯವನ್ನು ಹೆಚ್ಚಿಸುವುದು.