* 2024ರ ನೊಬೆಲ್ ಪ್ರಶಸ್ತಿಗಳ(Nobel Prize 2024) ಘೋಷಣೆ ಅಕ್ಟೋಬರ್ 07 ರಂದು (ಸೋಮವಾರ) ಆರಂಭವಾಗಿದ್ದು, 2024ರ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಜಾನ್ ಹಾಪ್ ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರಿಗೆ ಅಕ್ಟೋಬರ್ 8 (ಮಂಗಳವಾರ) ರಂದು ನೀಡಲಾಯಿತು.
* ಯುಎಸ್ ವಿಜ್ಞಾನಿ ಜಾನ್ J. ಹಾಪ್‌ಫೀಲ್ಡ್ ಮತ್ತು ಬ್ರಿಟಿಷ್-ಕೆನಡಾದ ಜೆಫ್ರಿ E. ಹಿಂಟನ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನಡೆಸಿದ ಅಧ್ಯಯನಕ್ಕಾಗಿ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸಿಕ್ಕಿದೆ "ಕೃತಕ ನರಗಳ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಮೂಲಭೂತ ಸಂಶೋಧನೆಗಳು ಮತ್ತು ಆವಿಷ್ಕಾರಗಳಿಗಾಗಿ" ಪ್ರಶಸ್ತಿ ಪ್ರಕಟಿಸಿದೆ.
* ಪ್ರಸ್ತುತ ಕಾಲಮಾನದಲ್ಲಿ ದೇಹದ ನರಗಳಲ್ಲಿ ಶಕ್ತಿಶಾಲಿ ಯಂತ್ರ ಕಲಿಕೆಗೆ ಇದು ಅಡಿಪಾಯವಾಗಲಿದೆ. ಈ ಸಂಶೋಧನೆಗೆ ಸಂಬಂಧಿಸಿದಂತೆ ಜಾನ್ ಹಾಪ್‌ಫೆಲ್ಡ್ ಅವರು ಡೇಟಾ, ಅದರ ಚಿತ್ರ, ಇತರ ರೀತಿಯ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮರುನಿರ್ಮಾಣ ಮಾಡಲು ಸಹಾಯಕ ತಂತ್ರಗಳನ್ನು ಬಳಸಿದ್ದಾರೆ.
* ಜೆಫ್ರಿ ಹಿಂಟನ್ ಅವರು ಜಾನ್ ಹಾಪ್‌ಫೆಲ್ಡ್ ಅವರು ನೀಡಿದ ಡೇಟಾಗಳ ಆಧಾರದ ಮೇಲೆ ಅವುಗಳ ಗುಣಲಕ್ಷಣಗಳನ್ನು ಸ್ವಾಯತ್ತವಾಗಿ ಕಂಡುಹಿಡಿಯುತ್ತಾರೆ.
* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್, ಸ್ಟಾಕ್ಹೋಮ್, ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್'ಹುಲ್ಲಿಯರ್ ಅವರಿಗೆ 2023 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಘೋಷಿಸಿತು.
* ವಸ್ತುವಿನಲ್ಲಿ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ಪಲ್ಸ್ ಅನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮೂರು ಜಂಟಿ ವಿಜೇತರು ಮಾನವೀಯತೆಗೆ ಪರಮಾಣುಗಳು ಮತ್ತು ಅಣುಗಳ ಒಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸಲು ಹೊಸ ಸಾಧನಗಳನ್ನು ನೀಡಿದ್ದಾರೆ.
* ಕೃತಕ ನರಮಂಡಲದಲ್ಲಿ, ಮೆದುಳಿನ ನ್ಯೂರಾನ್‌ಗಳು ವಿಭಿನ್ನ ಮೌಲ್ಯಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಇನ್ನು ಈ ಅಧ್ಯಯನಕ್ಕೆ 1980 ರ ದಶಕದಿಂದ ಕೃತಕ ನರಗಳ ಜಾಲದ ಮಾದರಿಯನ್ನು ಬಳಸಲಾಗಿದೆ.
* ಜಾನ್ ಹಾನ್‌ಫೀಲ್ಡ್ ಅವರು ಯುನೈಟೆಡ್ ಸ್ಟೇಟ್ಸ್ನ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ನರವಿಜ್ಞಾನ ಸಂಸ್ಥೆಯಲ್ಲಿ ಅಣ್ಣಿಕ ಜೀವಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಜೆಫ್ರಿ ಹಿಂಟನ್ ಅವರು ಕೆನಡಾದ ಟೊರೊಂಟೊ 'ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.
* ಈ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು ₹8.3 ಕೋಟಿ) ನಗದು ಪ್ರಶಸ್ತಿಯೊಂದಿಗೆ ಬರುತ್ತದೆ.
ಬುಧವಾರ, 09 ಅಕ್ಟೋಬರ್ 2024
10:52 ಪೂರ್ವಾಹ್ನ
Daily PDF
Nobel Prize 2024: ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್ಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ
Authored by:
Bhagya R K