➤ ವರ್ಷದ ಅತ್ಯಂತ ನಿರೀಕ್ಷಿತ ಮತ್ತು ಪ್ರತಿಷ್ಠಿತ 2026ರ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize 2026) ಪ್ರಕಟಗೊಂಡಿದೆ. ಅಂತರರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಯುದ್ಧ ಅಪರಾಧಗಳ ವಿರುದ್ಧ ಧ್ವನಿ ಎತ್ತಿರುವ ದಕ್ಷಿಣ ಆಫ್ರಿಕಾದ ಹಿರಿಯ ನ್ಯಾಯವಾದಿ ನವನೆಥಮ್ "ನವಿ" ಪಿಳ್ಳೈ (Navanethem "Navi" Pillay) ಅವರಿಗೆ ಈ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
➤ ಅಂತರರಾಷ್ಟ್ರೀಯ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ನರಮೇಧ (Genocide) ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ನಾರ್ವೆಯ ನೊಬೆಲ್ ಸಮಿತಿಯು ಈ ಪ್ರಶಸ್ತಿಯನ್ನು ಘೋಷಿಸಿದೆ.
➤ ನವಿ ಪಿಳ್ಳೈ:
- ಸಾಧನೆಗಳ ಮೈಲಿಗಲ್ಲು: ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಮೊದಲ ಶ್ವೇತೇತರ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
- ರುವಾಂಡಾ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ICTR): 1994ರ ರುವಾಂಡಾ ನರಮೇಧದ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ಯುಎನ್ ಸ್ಥಾಪಿಸಿದ ನ್ಯಾಯಾಲಯದಲ್ಲಿ ಅವರು ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಶಸ್ತ್ರ ಸಂಘರ್ಷದ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವೂ ನರಮೇಧದ ಭಾಗವಾಗಬಹುದು ಎಂಬ ಐತಿಹಾಸಿಕ ತೀರ್ಪನ್ನು ನೀಡುವಲ್ಲಿ ಇವರ ಪಾತ್ರ ಹಿರಿದಾದದ್ದು.
- ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ICC): ಇವರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ICC) ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ.
- ಯುಎನ್ ಮಾನವ ಹಕ್ಕುಗಳ ಹೈಕಮಿಷನರ್: 2008 ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರಾಗಿ (UN High Commissioner for Human Rights) ಕಾರ್ಯನಿರ್ವಹಿಸಿದ್ದಾರೆ.
2026ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ: ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ಹೋರಾಡಿದ ನವಿ ಪಿಳ್ಳೈಗೆ ಒಲಿದ ಪ್ರತಿಷ್ಠಿತ ಗೌರವ!
Published by Heena Sheregar
1 hour ago