➤ 2026ನೇ ಸಾಲಿನ ಪ್ರತಿಷ್ಠಿತ 'ಕಮಲಾದೇವಿ ಚಟ್ಟೋಪಧ್ಯಾಯ ಎನ್ಐಎಫ್ ಪುಸ್ತಕ ಪ್ರಶಸ್ತಿ' (Kamaladevi Chattopadhyay NIF Book Prize 2026) ಗಾಗಿ 5 ಅತ್ಯುತ್ತಮ ಕಾಲ್ಪನಿಕೇತರ (Non-Fiction) ಪುಸ್ತಕಗಳ ಅಂತಿಮ ಪಟ್ಟಿಯನ್ನು (Shortlist) 'ನ್ಯೂ ಇಂಡಿಯಾ ಫೌಂಡೇಶನ್' (NIF) ಅಧಿಕೃತವಾಗಿ ಪ್ರಕಟಿಸಿದೆ.
- ಪ್ರಶಸ್ತಿ ಮೊತ್ತ: ₹15 ಲಕ್ಷ ನಗದು.
- ಪ್ರಶಸ್ತಿ ಪ್ರದಾನ ಸಮಾರಂಭ: ಡಿಸೆಂಬರ್ 12, 2026 ರಂದು 'ಬೆಂಗಳೂರು ಸಾಹಿತ್ಯ ಉತ್ಸವ'ದಲ್ಲಿ (Bangalore Literature Festival) ವಿಜೇತರನ್ನು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
- ಅರ್ಹತೆ: ಆಧುನಿಕ ಮತ್ತು ಸಮಕಾಲೀನ ಭಾರತದ ಕುರಿತು 2025ನೇ ಇಸವಿಯಲ್ಲಿ ಪ್ರಕಟಗೊಂಡ ಅತ್ಯುತ್ತಮ ಕಾಲ್ಪನಿಕೇತರ (Non-Fiction) ಕೃತಿಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ.
➤ 2026ರ ಪ್ರಶಸ್ತಿಗೆ ಆಯ್ಕೆಯಾದ ಅಂತಿಮ 5 ಪುಸ್ತಕಗಳು ಮತ್ತು ಲೇಖಕರು:
1. "ಎ ಮ್ಯಾನ್ ಫಾರ್ ಆಲ್ ಸೀಸನ್ಸ್: ದಿ ಲೈಫ್ ಆಫ್ ಕೆ.ಎಂ. ಪಣಿಕ್ಕರ್" (A Man for All Seasons: The Life of K. M. Panikkar)
- ಲೇಖಕರು: ನಾರಾಯಣಿ ಬಸು (Narayani Basu)
- ವಿಷಯ: ಖ್ಯಾತ ರಾಜತಾಂತ್ರಿಕ ಹಾಗೂ ಇತಿಹಾಸಕಾರ ಕೆ.ಎಂ. ಪಣಿಕ್ಕರ್ ಅವರ ಜೀವನ ಮತ್ತು ಸಾಧನೆ.
2. "ಶ್ಯಾಟರ್ಡ್ ಲ್ಯಾಂಡ್ಸ್: ಫೈವ್ ಪಾರ್ಟಿಷನ್ಸ್ ಅಂಡ್ ದಿ ಮೇಕಿಂಗ್ ಆಫ್ ಮಾಡರ್ನ್ ಏಷ್ಯಾ" (Shattered Lands: Five Partitions and the Making of Modern Asia)
- ಲೇಖಕರು: ಸ್ಯಾಮ್ ಡಾಲ್ರಿಂಪಿಲ್ (Sam Dalrymple)
- ವಿಷಯ: ದಕ್ಷಿಣ ಏಷ್ಯಾದ ವಿಭಜನೆಗಳು ಮತ್ತು ಆಧುನಿಕ ಏಷ್ಯಾದ ರೂಪುಗೊಳ್ಳುವಿಕೆ.
3. "ಅಸೆಂಬ್ಲಿಂಗ್ ಇಂಡಿಯಾಸ್ ಕಾನ್ಸಿಟ್ಯೂಷನ್: ಎ ನ್ಯೂ ಡೆಮಾಕ್ರಟಿಕ್ ಹಿಸ್ಟರಿ" (Assembling India's Constitution: A New Democratic History)
- ಲೇಖಕರು: ರೋಹಿತ್ ಡಿ ಮತ್ತು ಆರ್ನಿತ್ ಶಾನಿ (Rohit De and Ornit Shani)
- ವಿಷಯ: ಭಾರತದ ಸಂವಿಧಾನ ರಚನೆ ಮತ್ತು ಪ್ರಜಾಪ್ರಭುತ್ವದ ಇತಿಹಾಸ.
4. "ಎ ಸಿಕ್ತ್ ಆಫ್ ಹ್ಯೂಮನಿಟಿ: ಇಂಡಿಪೆಂಡೆಂಟ್ ಇಂಡಿಯಾಸ್ ಡೆವಲಪ್ಮೆಂಟ್ ಒಡಿಸ್ಸಿ" (A Sixth of Humanity: Independent India's Development Odyssey)
- ಲೇಖಕರು: ದೇವೇಶ್ ಕಪೂರ್ ಮತ್ತು ಅರವಿಂದ್ ಸುಬ್ರಮಣಿಯನ್ (Devesh Kapur and Arvind Subramanian)
- ವಿಷಯ: ಸ್ವಾತಂತ್ರ್ಯಾನಂತರ ಭಾರತದ ಆರ್ಥಿಕ ಹಾಗೂ ಅಭಿವೃದ್ಧಿಯಯಾನ.
5. "ದಿ ಸೀಕ್ರೆಟ್ ಮಾಸ್ಟರ್: ಅರುಣ್ ಕಾಳಸ್ಕರ್ ಅಂಡ್ ಎ ಜರ್ನಿ ಟು ದಿ ಎಡ್ಜ್ ಆಫ್ ಮ್ಯೂಸಿಕ್" (The Secret Master: Arun Kashalkar and a Journey to the Edge of Music)
- ಲೇಖಕರು: ಸುಮನ ರಮಣನ್ (Sumana Ramanan)
- ವಿಷಯ: ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಅರುಣ್ ಕಾಳಸ್ಕರ್ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತ ಲೋಕ.
➤ ಕಮಲಾದೇವಿ ಚಟ್ಟೋಪಧ್ಯಾಯ NIF ಪುಸ್ತಕ ಪ್ರಶಸ್ತಿಯ ಹಿನ್ನೆಲೆ:
- ಈ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ ಮತ್ತು ಕರಕುಶಲ ಹಾಗೂ ಕಲೆಗಳ ಪ್ರವರ್ತಕಿ ಕಮಲಾದೇವಿ ಚಟ್ಟೋಪಧ್ಯಾಯ ಅವರ ನೆನಪಿಗಾಗಿ 2018ರಲ್ಲಿ ಸ್ಥಾಪಿಸಲಾಯಿತು.
- ಆಧುನಿಕ ಹಾಗೂ ಸಮಕಾಲೀನ ಭಾರತದ ಕುರಿತಾದ ಅತ್ಯುತ್ತಮ ಸಂಶೋಧನಾತ್ಮಕ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
- ಪ್ರಖ್ಯಾತ ರಾಜಕೀಯ ವಿಜ್ಞಾನಿ ನಿರಾಜಾ ಗೋಪಾಲ ಜಯಲ್ ನೇತೃತ್ವದ ಏಳು ಸದಸ್ಯರ ತೀರ್ಪುಗಾರರ ಸಮಿತಿಯು ಈ ಕೃತಿಗಳನ್ನು ಆಯ್ಕೆ ಮಾಡಿದೆ.
ನ್ಯೂ ಇಂಡಿಯಾ ಫೌಂಡೇಶನ್ನ ಪ್ರತಿಷ್ಠಿತ 'ಕಮಲಾದೇವಿ ಚಟ್ಟೋಪಧ್ಯಾಯ NIF ಪುಸ್ತಕ ಪ್ರಶಸ್ತಿ 2026'ರ ಅಂತಿಮ ಪಟ್ಟಿ ಪ್ರಕಟ!
Published by Akshata Halli
2 hours ago