➤ ಪ್ರಸ್ತುತ ನೇಪಾಳ ದೇಶವು ಚಳಿಗಾಲದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಭಾರತದಿಂದ 350 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳಲು ಅನುಮತಿ ಪಡೆದಿದೆ.
- ಅನುಮತಿ ನೀಡಿದವರು: ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA).
- ವಿದ್ಯುತ್ ಪಡೆಯುವ ಸಂಸ್ಥೆ: ನೇಪಾಳ ವಿದ್ಯುತ್ ಪ್ರಾಧಿಕಾರ (NEA - Nepal Electricity Authority).
- ಪ್ರಮಾಣ: ಗರಿಷ್ಠ 350 ಮೆಗಾವ್ಯಾಟ್ (MW) ವರೆಗೆ.
- ಅನುಮತಿಯ ಅವಧಿ: ನವೆಂಬರ್ 17, 2026 ರಿಂದ ಜುಲೈ 31, 2027 ರವರೆಗೆ.
- ಪ್ಲಾಟ್ಫಾರ್ಮ್: ಭಾರತೀಯ ಇಂಧನ ವಿನಿಮಯ ಕೇಂದ್ರದ (IEX) ಮೂಲಕ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಖರೀದಿಸಲಾಗುತ್ತದೆ. ದಿನದ ಒಟ್ಟು 17 ಗಂಟೆಗಳ ಕಾಲ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
➤ ಆಮದಿಗೆ ಪ್ರಮುಖ ಕಾರಣಗಳು:
1. ಋತುಮಾನದ ಬದಲಾವಣೆ (Seasonal Gap): ನೇಪಾಳವು ಮುಖ್ಯವಾಗಿ ನದಿ ಆಧಾರಿತ ಜಲವಿದ್ಯುತ್ ಯೋಜನೆಗಳನ್ನು (Run-of-the-river hydropower projects) ಅವಲಂಬಿಸಿದೆ. ಚಳಿಗಾಲದಲ್ಲಿ ನದಿಗಳಲ್ಲಿ ನೀರಿನ ಮಟ್ಟ ಕುಸಿಯುವುದರಿಂದ ಆಂತರಿಕ ಉತ್ಪಾದನೆಯು ಗಣನೀಯವಾಗಿ ಕಡಿಮೆಯಾಗುತ್ತದೆ.
2. ಪ್ರವಾಹದಿಂದ ಉಂಟಾದ ಹಾನಿ: ಇತ್ತೀಚೆಗೆ ರಸೂವಾ ಪ್ರದೇಶದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿ ಹೂಳು ಹಾಗೂ ಪ್ರವಾಹದಿಂದಾಗಿ ಹಲವು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. ಸುಮಾರು 431 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವು ರಾಷ್ಟ್ರೀಯ (Grid)ನಿಂದ ಕಡಿತಗೊಂಡಿದೆ.
3. ಚಳಿಗಾಲದ ಬೇಡಿಕೆ: ಡಿಸೆಂಬರ್ನಿಂದ ಮಾರ್ಚ್ ಅವಧಿಯಲ್ಲಿ ನೇಪಾಳದಲ್ಲಿ ವಿದ್ಯುತ್ ಕೊರತೆ ತೀವ್ರಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಭಾರತದ ನೆರವು ಅತ್ಯಗತ್ಯವಾಗಿದೆ.
➤ ಪ್ರಸರಣ ಮಾರ್ಗಗಳು (Transmission Routes): ಭಾರತದಿಂದ ನೇಪಾಳಕ್ಕೆ ಈ ಕೆಳಗಿನ ಪ್ರಸರಣ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತದೆ:
- 300 ಮೆಗಾವ್ಯಾಟ್ ಸಾಮರ್ಥ್ಯ: 132 ಕೆವಿ ಕಟಯ್ಯ-ಕುಶಾಹಾ (Kataiya-Kushaha), ರಾಮನಗರ-ಸುರಜಪುರ (Ramnagar-Surajpura) ಮತ್ತು ರಕ್ಸಾಲ್-ಪರ್ವಾನಿಪುರ್ (Raxaul-Parwanipur) ಮಾರ್ಗಗಳು.
- ಉಳಿದ 50 ಮೆಗಾವ್ಯಾಟ್ ಸಾಮರ್ಥ್ಯ: 132 ಕೆವಿ ಹೊಸ ನೌತನ್ವಾ-ಮೈನಾಹಿಯಾ (New Nautanwa-Mainahiya) ಮಾರ್ಗ.(ಗಮನಿಸಿ: ಮುಂಜಾನೆ 5 ರಿಂದ 8 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9 ರವರೆಗಿನ ಪೀಕ್ ಅವರ್ಗಳಲ್ಲಿ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ).
ನೇಪಾಳಕ್ಕೆ ಚಳಿಗಾಲದ ವಿದ್ಯುತ್ ಪೂರೈಕೆ: ಭಾರತದಿಂದ 350 ಮೆ.ವಾ. ವಿದ್ಯುತ್ ಆಮದು ಮಾಡಿಕೊಳ್ಳಲು ಅನುಮತಿ
Published by Akshata Halli
2 hours ago