➤ ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಕ್ರೀಡಾಕೂಟದ (Asian Games 2026) ಅತ್ಯಂತ ಯಶಸ್ವಿ ಅಥ್ಲೀಟ್‌ಗಳಲ್ಲಿ ಒಬ್ಬರಾದ ಭಾರತದ ಶೂಟರ್ ನೀರೂ ಧಂಡಾ (Neeru Dhanda) ಅವರು ಸಮಾರೋಪ ಸಮಾರಂಭದಲ್ಲಿ (Closing Ceremony 04-10-2026) ಭಾರತದ ಮಹಿಳಾ ಧ್ವಜಧಾರಿಯಾಗಿ (Flag Bearer) ದೇಶವನ್ನು ಮುನ್ನಡೆಸಲಿದ್ದಾರೆ. 27 ವರ್ಷ ವಯಸ್ಸಿನ ನೀರೂ ಧಂಡಾ ಅವರು ಈ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ 2 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಜಯಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
➤ ನೀರೂ ಧಂಡಾ ಅವರ ಐತಿಹಾಸಿಕ ಸಾಧನೆಗಳು
1. ಮಹಿಳಾ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ (ಚಿನ್ನದ ಪದಕ):
- ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಫೈನಲ್‌ನಲ್ಲಿ 28 ಅಂಕಗಳನ್ನು ಗಳಿಸಿ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
- ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳಾ ಟ್ರ್ಯಾಪ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ಪಾತ್ರರಾದರು.
(ಭಾರತಕ್ಕೆ ಕೊನೆಯ ಬಾರಿಗೆ ಟ್ರ್ಯಾಪ್ ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನ ಬಂದಿದ್ದು 1978ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ರಣಧೀರ್ ಸಿಂಗ್ ಅವರಿಂದ).
2. ಟ್ರ್ಯಾಪ್ ಮಿಶ್ರ ಜೋಡಿ (ಚಿನ್ನದ ಪದಕ):
ನೀರೂ ಧಂಡಾ ಅವರು ಕೈಏಷ್ಯನ್ ಗೇಮ್ಸ್ ಸಮಾರೋಪ: ಭಾರತದ ಧ್ವಜಧಾರಿಯಾಗಿ ಶೂಟರ್ ನೀರೂ ಧಂಡಾ
➤ ಕೂಟದಲ್ಲಿ ನೀರೂ ಧಂಡಾ ಸಾಧನೆ:
1.ಟ್ರ್ಯಾಪ್ ವೈಯಕ್ತಿಕ ವಿಭಾಗ: ಚಿನ್ನದ ಪದಕ
2.ಮಿಶ್ರ ಡಬಲ್ಸ್ (Mixed Doubles) ವಿಭಾಗ: ಚಿನ್ನದ ಪದಕ
3.ಮಹಿಳಾ ತಂಡ (Team Event) ವಿಭಾಗ: ಬೆಳ್ಳಿ ಪದಕ
ಇತ್ತೀಚೆಗೆ ಇಟಲಿಯ ಲೊನಾಟೊದಲ್ಲಿ ನಡೆದ ಐಎಸ್ಎಸ್‌ಎಫ್ (ISSF) ವಿಶ್ವಕಪ್‌ನಲ್ಲೂ ನೀರೂ ಅವರು ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದರು.
"ನೀರೂ ಧಂಡಾ ಅವರು ಶನಿವಾರ ಬೆಳಿಗ್ಗೆ ನಾಗೋಯಾಕ್ಕೆ ಆಗಮಿಸಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪುರುಷರ ವಿಭಾಗದ ಧ್ವಜಧಾರಿ ಯಾರೆಂಬುದನ್ನು ಶನಿವಾರ ಅಧಿಕೃತವಾಗಿ ನಿರ್ಧರಿಸಿ ಪ್ರಕಟಿಸಲಾಗುವುದು," ಎಂದು ಭಾರತೀಯ ನಿಯೋಗದ ಡೆಪ್ಯೂಟಿ ಡೆಫ್ ಡಿ ಮಿಷನ್ (Deputy Chef de Mission) ಅಂಜಲಿ ಭಾಗವತ್ ತಿಳಿಸಿದ್ದಾರೆ.