* ನೇಪಾಳದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರು ಭಾನುವಾರ(ಆಗಸ್ಟ್ 14) ಹಂಗಾಮಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. 73 ವರ್ಷದ ಕಾರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿದ್ದಾರೆ.
* ಅವರ ಸಂಪುಟಕ್ಕೆ ಮೂವರು ಸಚಿವರು ಸೇರ್ಪಡೆಯಾಗಿದ್ದು, ಅಧ್ಯಕ್ಷ ರಾಮಚಂದ್ರ ಪೌಡೆಲ್ ಸೋಮವಾರ(ಆಗಸ್ಟ್ 15) ಅವರಿಗೆ ಪ್ರಮಾಣವಚನ ಬೋಧಿಸಿದರು.
* ಕುಲ್ಮನ್ ಘಿಸಿಂಗ್ ಇಂಧನ, ಜಲ ಸಂಪನ್ಮೂಲ, ನೀರಾವರಿ, ಭೌತಿಕ ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರವಹಿಸಿಕೊಂಡರು.
* ರಾಮೇಶ್ವರ್ ಖನಾಲ್ ಹಣಕಾಸು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
* ವಕೀಲ ಓಂ ಪ್ರಕಾಶ್ ಆರ್ಯಲ್ ಗೃಹ ವ್ಯವಹಾರ ಮತ್ತು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
* ಭ್ರಷ್ಟಾಚಾರ ಮತ್ತು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧದ ವಿರುದ್ಧ ನಡೆದ ದೇಶವ್ಯಾಪಿ ಪ್ರತಿಭಟನೆಯ ನಡುವೆಯೇ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದರು. ಇದರಿಂದ ಕಾರ್ಕಿ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.
ನೇಪಾಳದ ಸಚಿವ ಸಂಪುಟಕ್ಕೆ ಮೂವರು ಸಚಿವರ ಸೇರ್ಪಡೆ
Published by Jyoti Angadi
16 ಸೆಪ್ಟೆಂಬರ್ 2025