* ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಲಾಗಿದ್ದು, ಅವರು ಶುಕ್ರವಾರ(ಆಗಸ್ಟ್ 12) ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
* ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಪ್ರಮಾಣ ವಚನ ಬೋಧಿಸಿದರು. ಕರ್ಕಿ ಅವರ ಸಂಪುಟದಲ್ಲಿ ಇನ್ನೂ ಸಚಿವರನ್ನು ಸೇರಿಸಲಾಗಿಲ್ಲ.
* ಈ ಬೆಳವಣಿಗೆಗೆ ಮುನ್ನ, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿರೋಧಿಸಿ ಯುವಜನತೆ ನಡೆಸಿದ ಜನರೇಷನ್ ಝಡ್ ಪ್ರತಿಭಟನೆಗಳು ದೇಶವನ್ನು ತೀವ್ರ ತಲ್ಲಣಗೊಳಿಸಿದವು.
* ಪ್ರತಿಭಟನೆಯಲ್ಲಿ 51 ಮಂದಿ ಸಾವನ್ನಪ್ಪಿದರು. ಸಾಮಾಜಿಕ ಜಾಲತಾಣ ನಿಷೇಧ, ಸರ್ಕಾರಿ ಕಚೇರಿಗಳು ಮತ್ತು ಸಂಸತ್ ಭವನದ ಮೇಲೆ ದಾಳಿ, ಸಚಿವರ ಮೇಲೆ ಹಲ್ಲೆ ನಡೆದಿತ್ತು.
* ಈ ಪರಿಸ್ಥಿತಿಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು ಮತ್ತು ಅವರನ್ನು ದೇಶ ತೊರೆಯುವಂತೆ ಒತ್ತಾಯ ವ್ಯಕ್ತವಾಯಿತು. ನಂತರ, ಅಧ್ಯಕ್ಷರು, ಸೇನಾ ಮುಖ್ಯಸ್ಥರು ಮತ್ತು ಪ್ರತಿಭಟನಾ ಪ್ರತಿನಿಧಿಗಳ ಒಮ್ಮತದಿಂದ ಕರ್ಕಿ ಅವರ ಹೆಸರನ್ನು ಮಧ್ಯಂತರ ಪ್ರಧಾನಿಯಾಗಿ ಅಂತಿಮಗೊಳಿಸಲಾಯಿತು.
* ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಚರ್ಚೆಯಲ್ಲಿದ್ದರೂ, ಅವರು ಹುದ್ದೆ ವಹಿಸಲು ನಿರಾಕರಿಸಿ ಕರ್ಕಿ ಅವರಿಗೆ ಬೆಂಬಲ ನೀಡಿದರು. ಮುಂದಿನ ಚುನಾವಣೆ ವರೆಗೆ ದೇಶವನ್ನು ಮುನ್ನಡೆಸಲು ಕರ್ಕಿ ನೇತೃತ್ವದ ಹಂಗಾಮಿ ಸರ್ಕಾರ ಕಾರ್ಯನಿರ್ವಹಿಸಲಿದೆ.
ನೇಪಾಳದ ಮಧ್ಯಂತರ ಪ್ರಧಾನಿ ಆಗಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕಾರ
Published by Jyoti Angadi
13 ಸೆಪ್ಟೆಂಬರ್ 2025