* ಗಡಿಯಲ್ಲಿ ಚೀನಾ ಜೊತೆಗಿನ ಉದ್ವಿಗ್ನ ಸ್ಥಿತಿಯ ನಡುವೆಯೇ ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ತನ್ನ ವ್ಯಾಪ್ತಿಯ ಹಿಂದೂ ಮಹಾಸಾಗರದಲ್ಲಿ ಯುದ್ಧವಿಮಾನಗಳ ನೌಕಾವಾಹಕಗಳಾದ 'ಐಎನ್‌ಎಸ್ ವಿಕ್ರಮಾದಿತ್ಯ' ಮತ್ತು 'ಐಎನ್‌ಎಸ್ ವಿಕ್ರಾಂತ್' ಒಳಗೊಂಡಂತೆ ಪೂರ್ಣಪ್ರಮಾಣದ ಅಭ್ಯಾಸ ಕಾರ್ಯಾಚರಣೆ ನಡೆಸಲಾಯಿತ್ತು.
* ಮಿಗ್-29ಕೆ ಯುದ್ಧ ವಿಮಾನಗಳು, ಹೊಸದಾಗಿ ವಾಯುಪಡೆಗೆ ಸೇರಿರುವ ಎಂಎಚ್60ಆರ್ ಬಳಕೆಯಲ್ಲಿರುವ ಕಾಮೊವ್, ಸೀ ಕಿಂಗ್, ಚೇತಕ್, ದೇಶೀಯವಾಗಿ ತಯಾರಿಸಲಾದ ಹಗುರ ಯುದ್ಧವಿಮಾನ ಒಳಗೊಂಡಂತೆ ಸುಮಾರು 35 ಯುದ್ಧ ವಿಮಾನಗಳನ್ನು ಹೊತ್ತ ಎರಡೂ ನೌಕಾವಾಹಕಗಳು ಸಮುದ್ರದಲ್ಲಿ ಸಂಚರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತ್ತು.
* ಸಮರಾಭ್ಯಾಸವು ಭಾರತೀಯ ನೌಕಾಪಡೆಯ ಕಡಲ ಭದ್ರತೆಯನ್ನು ಹೆಚ್ಚಿಸುವ ಮತ್ತು ಹಿಂದೂ ಮಹಾಸಾಗರ ಹಾಗೂ ಸಾಮರ್ಥ್ಯ ಪ್ರದರ್ಶನದ ದಿಸೆಯಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ' ಎಂದು ಭಾರತೀಯ ನೌಕಾಪಡೆಯ ವಕ್ತಾರ, ಕಮಾಂಡರ್ ವಿವೇಕ್ ಮಧ್ವಲ್ ರವರು ತಿಳಿಸಿದ್ದಾರೆ.
ನೌಕಾಪಡೆಯಿಂದ ಜಂಟಿ ಅಭ್ಯಾಸ ಕಾರ್ಯಾಚರಣೆ
Published by Bhagya R K
12 ಜೂನ್ 2023