* ಅಡ್ಮಿರಲ್ ಆರ್. ಹರಿಕುಮಾರ್ ಸೇವೆಯಿಂದ ನಿವೃತ್ತರಾದ ಹಿನ್ನೆಲೆ ದಿನೇಶ್ ಕುಮಾರ್ ತ್ರಿಪಾಠಿ ಅವರು ಏಪ್ರಿಲ್ 30 (ಮಂಗಳವಾರ) ರಂದು ಭಾರತೀಯ ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
* ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮೊದಲು ತ್ರಿಪಾಠಿ ಅವರು ನೌಕಾಪಡೆಯ ಉಪ ಮುಖ್ಯಸ್ಥರಾಗಿ (ವೈಸ್ ಅಡ್ಮಿರಲ್) ಸೇವೆ ಸಲ್ಲಿಸಿದ್ದರು.
* 1964ರ ಮೇ 15 ರಂದು ಜನಿಸಿದ ತ್ರಿಪಾಠಿ ಅವರು ಖಡಕ್‌ವಾಸ್ಲಾದ ಸೈನಿಕ್ ಸ್ಕೂಲ್ ರೇವಾ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1985ರಲ್ಲಿ ಅವರನ್ನು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಗಿತ್ತು.
* ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮೊದಲು ತ್ರಿಪಾಠಿ ಅವರು ನೌಕಾಪಡೆಯ ಉಪ ಮುಖ್ಯಸ್ಥರಾಗಿ(ವೈಸ್ ಅಡ್ಮಿರಲ್) ಸೇವೆ ಸಲ್ಲಿಸಿದ್ದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ನೌಕಾಪಡೆಯ 26 ನೇ ಮುಖ್ಯಸ್ಥರಾಗಿ ಭಾರತೀಯ ನೌಕಾಪಡೆಯ ಕಮಾಂಡ್ ಅನ್ನು ವಹಿಸಿಕೊಂಡರು.
ಬುಧವಾರ, 01 ಮೇ 2024
11:39 ಪೂರ್ವಾಹ್ನ
Daily PDF
ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕುಮಾರ್ ತ್ರಿಪಾಠಿ ಅಧಿಕಾರ ಸ್ವೀಕಾರ
Authored by:
Bhagya R K