➤ ಪ್ರತಿ ವರ್ಷದಂತೆ ಈ ಬಾರಿಯೂ ಸೆಪ್ಟೆಂಬರ್ 5 (ಶಿಕ್ಷಕರ ದಿನಾಚರಣೆ) ರಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಶಿಕ್ಷಕರನ್ನು ಗೌರವಿಸಲು ಕೇಂದ್ರ ಶಿಕ್ಷಣ ಸಚಿವಾಲಯ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನು ಘೋಷಿಸಿದೆ.
- ಒಟ್ಟು ಪ್ರಶಸ್ತಿ ಪುರಸ್ಕೃತರು: 48 ಶಾಲಾ ಶಿಕ್ಷಕರು.
- ಲಿಂಗಾನುಪಾತ: 26 ಪುರುಷ ಶಿಕ್ಷಕರು ಮತ್ತು 22 ಮಹಿಳಾ ಶಿಕ್ಷಕಿಯರು.
- ಪ್ರತಿನಿಧಿತ್ವ: 27 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರ್ಕಾರದ ಅಡಿಯಿರುವ 6 ಸಂಸ್ಥೆಗಳಿಂದ ಶಿಕ್ಷಕರ ಆಯ್ಕೆ ನಡೆದಿದೆ.
- ಸ್ಥಳ: ವಿಜ್ಞಾನ ಭವನ, ನವದೆಹಲಿ.
➤ ಆಯ್ಕೆ ಪ್ರಕ್ರಿಯೆ: ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education & Literacy) ಕಠಿಣ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದೆ.
- ಜಿಲ್ಲಾ ಮಟ್ಟ (District Level)
- ರಾಜ್ಯ ಮಟ್ಟ (State Level)
- ರಾಷ್ಟ್ರೀಯ ಮಟ್ಟ (National Level / Independent National Jury)
ಮೂರು ಹಂತಗಳ ಆನ್‌ಲೈನ್ ಸ್ವಯಂ-ನಾಮನಿರ್ದೇಶನ ಹಾಗೂ ವಿಮರ್ಶೆಯ ಮೂಲಕ ಶಿಕ್ಷಣದಲ್ಲಿ ವಿನೂತನ ಪ್ರಯೋಗ ಮಾಡಿದ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರನ್ನು ಗುರುತಿಸಲಾಗಿದೆ.
➤ ಪ್ರಶಸ್ತಿ ಸಮಾರಂಭದ ವಿಶೇಷತೆಗಳು:
- ಸೆಪ್ಟೆಂಬರ್ 5ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರ ಸಾಧನೆಗಳು, ಅವರ ವಿನೂತನ ಬೋಧನಾ ಪದ್ಧತಿಗಳು ಮತ್ತು ಶ್ಲಾಘನೀಯ ಕಾರ್ಯಗಳನ್ನು ಬಿಂಬಿಸುವ ಕಿರು ಸಾಕ್ಷ್ಯಚಿತ್ರಗಳನ್ನು (Short Documentaries) ಪ್ರದರ್ಶಿಸಲಾಗುತ್ತದೆ.
- ಈ ಕಾರ್ಯಕ್ರಮವನ್ನು ದೂರದರ್ಶನ (Doordarshan), ಸ್ವಯಂ ಪ್ರಭಾ (SWAYAM PRABHA) ಚಾನೆಲ್‌ಗಳು ಹಾಗೂ ಶಿಕ್ಷಣ ಸಚಿವಾಲಯದ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ (Live Telecast) ಮಾಡಲಾಗುತ್ತದೆ.