➤ ಭಾರತವು ಸುದೀರ್ಘ ಕಡಲ ತೀರವನ್ನು ಹೊಂದಿರುವ ದೇಶ. ಪ್ರಾಚೀನ ಕಾಲದಿಂದಲೂ ಸಮುದ್ರ ಮಾರ್ಗಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿವೆ. ಪ್ರತಿ ವರ್ಷ ಏಪ್ರಿಲ್ 5 ರಂದು ಭಾರತದಾದ್ಯಂತ 'ರಾಷ್ಟ್ರೀಯ ಸಾಗರಯಾನ ದಿನ' ವನ್ನು ಆಚರಿಸುವ ಮೂಲಕ ನಮ್ಮ ನೌಕಾಯಾನ ಕ್ಷೇತ್ರದ ಸಾಧನೆ ಮತ್ತು ಪ್ರಾಮುಖ್ಯತೆಯನ್ನು ಸ್ಮರಿಸಲಾಗುತ್ತದೆ.
➤ ಭಾರತದ ಸಾಗರಯಾನ ಇತಿಹಾಸದಲ್ಲಿ 1919ರ ಏಪ್ರಿಲ್ 5 ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಂದು 'ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿ'ಗೆ ಸೇರಿದ 'ಎಸ್.ಎಸ್. ಲಾಯಲ್ಟಿ' (SS Loyalty) ಎಂಬ ಹಡಗು ಮುಂಬಯಿನಿಂದ ಲಂಡನ್‌ಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿತು. ಬ್ರಿಟಿಷರ ಆಧಿಪತ್ಯವಿದ್ದ ಕಾಲದಲ್ಲಿ ಭಾರತೀಯ ಹಡಗೊಂದು ಅಂತರಾಷ್ಟ್ರೀಯ ಜಲಪ್ರದೇಶಕ್ಕೆ ಕಾಲಿಟ್ಟಿದ್ದು ಒಂದು ಐತಿಹಾಸಿಕ ವಿಜಯವಾಗಿತ್ತು. ಇದರ ಸ್ಮರಣಾರ್ಥವಾಗಿ ಭಾರತ ಸರ್ಕಾರವು 1964 ಏಪ್ರಿಲ್ 5 ರಿಂದ ರಾಷ್ಟ್ರೀಯ ಸಾಗರಯಾನ ದಿನಾಚರಣೆಯನ್ನು ಅಧಿಕೃತವಾಗಿ ಜಾರಿಗೆ ತಂದಿತು.
➤ ಭಾರತದ ಕಡಲ ವಲಯದ ಪ್ರಮುಖ ಅಂಕಿ-ಅಂಶಗಳು:
- ಕರಾವಳಿ ತೀರದ ಉದ್ದ: ಭಾರತವು ಸುಮಾರು 7,517 ಕಿಲೋ ಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ.
- ಬಂದರುಗಳ ಸಂಖ್ಯೆ: ದೇಶದಲ್ಲಿ ಒಟ್ಟು 13 ಪ್ರಮುಖ ಬಂದರುಗಳು ಮತ್ತು ಸುಮಾರು 200 ಸಣ್ಣ ಬಂದರುಗಳಿವೆ.
- ವ್ಯಾಪಾರದ ಪಾಲು: ಭಾರತದ ಒಟ್ಟು ವ್ಯಾಪಾರ ವಹಿವಾಟಿನ ಸುಮಾರು ಶೇ. 95 ರಷ್ಟು ಪ್ರಮಾಣ ಮತ್ತು ಶೇ. 70 ರಷ್ಟು ಮೌಲ್ಯವು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ.
- ಪ್ರಮುಖ ಬಂದರುಗಳು: ಕೋಲ್ಕತ್ತಾ, ಮುಂಬಯಿ, ಚೆನ್ನೈ, ಕೊಚ್ಚಿ, ಕಾಂಡ್ಲಾ, ವಿಶಾಖಪಟ್ಟಣಂ, ಪ್ಯಾರದೀಪ್, ತೂತುಕುಡಿ, ನವ ಮಂಗಳೂರು, ಮರ್ಮಗಾಂವ್, ಜವಾಹರಲಾಲ್ ನೆಹರು ಬಂದರು (JNPT), ಎನ್ನೋರ್ ಮತ್ತು ಮಹಾರಾಷ್ಟ್ರದ ಇತ್ತೀಚಿನ ವಧಾವನ್ ಬಂದರು.
➤ ಭಾರತವು 'ಮ್ಯಾರಿಟೈಮ್ ಇಂಡಿಯಾ ವಿಷನ್' ಮತ್ತು 'ಕ್ರೂಸ್ ಭಾರತ್ ಮಿಷನ್' ಯೋಜನೆಗಳ ಮೂಲಕ ತನ್ನ ನೌಕಾವಲಯದ ಮೂಲಸೌಕರ್ಯ, ಪ್ರವಾಸೋದ್ಯಮ ಮತ್ತು ನೈಪುಣ್ಯತೆಯನ್ನು ಆಧುನೀಕರಿಸಿ, 2047ರ ವೇಳೆಗೆ ಜಾಗತಿಕ ಸಾಗರಯಾನ ಕ್ಷೇತ್ರದಲ್ಲಿ ಅಗ್ರಗಣ್ಯ ಶಕ್ತಿಯಾಗಿ ಹೊರಹೊಮ್ಮುವ ಗುರಿ ಹೊಂದಿದೆ.
➤ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಗರಯಾನ: ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತರಾಷ್ಟ್ರೀಯ ಸಾಗರಯಾನ ಸಂಘಟನೆಯು (IMO) ಜಾಗತಿಕ ಹಡಗುಯಾನದ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಹೊಣೆ ಹೊತ್ತಿದ್ದು, 1959ರಿಂದ ಸದಸ್ಯ ರಾಷ್ಟ್ರವಾಗಿರುವ ಭಾರತವು ಇದರ ಮಾರ್ಗಸೂಚಿಗಳನ್ವಯ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಗುರುವಾರದಂದು 'ವಿಶ್ವ ಸಾಗರಯಾನ ದಿನ'ವನ್ನು ಆಚರಿಸುತ್ತದೆ.
ಇತರ ದೇಶಗಳ ಆಚರಣೆ:
ಅಮೆರಿಕ: ಮೇ 22
ಚೀನಾ: ಜುಲೈ 11
ಆಸ್ಪ್ರೇಲಿಯಾ: ಸೆಪ್ಟೆಂಬರ್ 3
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.