➤ ಕಳೆದ ಒಂದು ದಶಕದಲ್ಲಿ (2013-14 ರಿಂದ 2022-23) ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಹೂಡಿಕೆ ಗಮನಾರ್ಹವಾಗಿ ಹೆಚ್ಚಾಗಿದ್ದು, ನಾಗರಿಕರ ಸ್ವಂತ ಕೈಯಿಂದ ಭರಿಸುವ ವೆಚ್ಚ (Out-of-Pocket Expenditure) ಗಣನೀಯವಾಗಿ ಕಡಿಮೆಯಾಗಿದೆ.
1.ಸರ್ಕಾರಿ ಆರೋಗ್ಯ ವೆಚ್ಚದಲ್ಲಿ ಭಾರಿ ಹೆಚ್ಚಳ (Rise in Government Health Expenditure)
- ಮೂರು ಪಟ್ಟು ಹೆಚ್ಚಳ: 2013-14ರಲ್ಲಿ ₹1.30 ಲಕ್ಷ ಕೋಟಿ ಇದ್ದ ಸರ್ಕಾರದ ಒಟ್ಟು ಆರೋಗ್ಯ ವೆಚ್ಚವು 2022-23ರ ವೇಳೆಗೆ ₹3.85 ಲಕ್ಷ ಕೋಟಿಗೆ ಏರಿಕೆಯಾಗಿದೆ.
- ಜಿಡಿಪಿ ಪಾಲು (GHE as % of GDP): ದೇಶದ ಒಟ್ಟು ಜಿಡಿಪಿಯಲ್ಲಿ (GDP) ಆರೋಗ್ಯ ವಲಯದ ಪಾಲು ಶೇ. 1.15 ರಿಂದ ಶೇ. 1.43 ಕ್ಕೆ ಏರಿದೆ (ಹೊಸ ಜಿಡಿಪಿ ಸರಣಿಯ ಪ್ರಕಾರ ಇದು ಶೇ. 1.48 ರಷ್ಟಿದೆ).
- ತಲಾ ಆರೋಗ್ಯ ವೆಚ್ಚ (Per Capita Spending): ಸರ್ಕಾರದ ತಲಾ ಆರೋಗ್ಯ ವೆಚ್ಚವು ₹1,042 ರಿಂದ ಸುಮಾರು 2.7 ಪಟ್ಟು ಹೆಚ್ಚಾಗಿ ₹2,786 ಕ್ಕೆ ತಲುಪಿದೆ.
- ಸಾಮಾನ್ಯ ಜನರು ಆಸ್ಪತ್ರೆ, ಔಷಧಿ ಹಾಗೂ ಚಿಕಿತ್ಸೆಗಾಗಿ ತಮ್ಮ ಸ್ವಂತ ಜೆಬಿನಿಂದ ಮಾಡುವ ವೆಚ್ಚವನ್ನು 'ಔಟ್ ಆಫ್ ಪಾಕೆಟ್ ಎಕ್ಸ್‌ಪೆಂಡಿಚರ್' ಎನ್ನಲಾಗುತ್ತದೆ.
- 2013-14ರಲ್ಲಿ ದೇಶದ ಒಟ್ಟು ಆರೋಗ್ಯ ವೆಚ್ಚದಲ್ಲಿ ಜನರ ಸ್ವಂತ ಪಾಲು ಶೇ. 64.2 ರಷ್ಟಿತ್ತು. ಆದರೆ 2022-23ರ ವರದಿಯ ಪ್ರಕಾರ ಇದು ಶೇ. 43.4 ಕ್ಕೆ ಕುಸಿದಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂಬುದನ್ನು ತೋರಿಸುತ್ತದೆ.
- ಸರ್ಕಾರವು ಪ್ರಾಥಮಿಕ ಆರೋಗ್ಯ ರಕ್ಷಣೆಗೆ ನೀಡುವ ನಿಧಿಯನ್ನು ₹0.5 ಲಕ್ಷ ಕೋಟಿಯಿಂದ ₹1.4 ಲಕ್ಷ ಕೋಟಿಗೆ (ಎರಡಕ್ಕಿಂತ ಹೆಚ್ಚು ಪಟ್ಟು) ಹೆಚ್ಚಿಸಿದೆ. ಒಟ್ಟು ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕ್ಷೇತ್ರವೇ ಸಿಂಹಪಾಲನ್ನು (ಶೇ. 46) ಹೊಂದಿದೆ.
- ಆಯುಷ್ಮಾನ್ ಆರೋಗ್ಯ ಮಂದಿರಗಳ ಸ್ಥಾಪನೆ, ಉಚಿತ ಔಷಧಿ ಮತ್ತು ತಪಾಸಣೆ ಯೋಜನೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
- ಆಯುಷ್ಮಾನ್ ಭಾರತ್ (PM-JAY) ನಂತಹ ಸರ್ಕಾರಿ ಆರೋಗ್ಯ ವಿಮೆ ಹಾಗೂ ನೌಕರರ ಆರೋಗ್ಯ ಯೋಜನೆಗಳ ಒಳಗೊಳ್ಳುವಿಕೆ (Social Security Expenditure) ಶೇ. 6 ರಿಂದ ಶೇ. 9.9 ಕ್ಕೆ ಹೆಚ್ಚಾಗಿದೆ.
- ಖಾಸಗಿ ಆರೋಗ್ಯ ವಿಮೆಯ ಪಾಲು ಕೂಡ ಶೇ. 3.4 ರಿಂದ ಶೇ. 9.2 ಕ್ಕೆ ಏರಿಕೆಯಾಗಿದ್ದು, ಜನರ ಆರೋಗ್ಯ ಜಾಗೃತಿ ಹೆಚ್ಚಿರುವುದನ್ನು ಇದು ಸೂಚಿಸುತ್ತದೆ
➤ ರಾಷ್ಟ್ರೀಯ ಆರೋಗ್ಯ ಖಾತೆ (NHA) ಪ್ರಮುಖ ಸೂಚಕಗಳ ಹೋಲಿಕೆ:
ಪ್ರಮುಖ ಸೂಚಕಗಳು (Indicators): 2013-14ರ ಸ್ಥಿತಿ : 2022-23ರ
- ಪ್ರಸ್ತುತ ಸ್ಥಿತಿಒಟ್ಟು ಸರ್ಕಾರಿ ಆರೋಗ್ಯ ವೆಚ್ಚ: ₹1.30 ಲಕ್ಷ ಕೋಟಿ : ₹3.85 ಲಕ್ಷ ಕೋಟಿ
- ಜಿಡಿಪಿಯಲ್ಲಿ ಆರೋಗ್ಯ ವೆಚ್ಚದ ಪಾಲು: 1.15% : 1.43% (ಹೊಸ ಸರಣಿಯಲ್ಲಿ 1.48%)
- ಜನರ ಸ್ವಂತ ಕೈಯ ವೆಚ್ಚ (OOPE): 64.2% : 43.4% (ಕಡಿಮೆಯಾಗಿದೆ)
- ಸರ್ಕಾರದ ತಲಾ ಆರೋಗ್ಯ ವೆಚ್ಚ: ₹1,042 : ₹2,786
- ಒಟ್ಟು ಆರೋಗ್ಯ ವೆಚ್ಚ (THE): ₹8,81,359 ಕೋಟಿ (ಜಿಡಿಪಿಯ 3.37%)