➤ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಒ ಉದ್ಯಮದ ಉನ್ನತ ಸಂಸ್ಥೆಯಾದ 'ನಾಸಕಾಮ್' (NASSCOM - National Association of Software and Service Companies) ತನ್ನ ನೂತನ ಅಧ್ಯಕ್ಷರಾಗಿ ಫ್ರಾಕ್ಟಲ್ (Fractal) ಕಂಪನಿಯ ಸಹ-ಸಂಸ್ಥಾಪಕ ಮತ್ತು ಎಐ (AI) ತಜ್ಞರಾದ ಶ್ರೀಕಾಂತ್ ವೇಲಮಕಣ್ಣಿ ಅವರನ್ನು ನೇಮಕ ಮಾಡಿದೆ. ಕೃತಕ ಬುದ್ಧಿಮತ್ತೆ (Artificial Intelligence) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀಕಾಂತ್ ಅವರ ನೇಮಕವು ಭಾರತದ ಐಟಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
➤ ಶ್ರೀಕಾಂತ್ ವೇಲಮಕಣ್ಣಿ ಅವರು ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿದ್ದಾರೆ. ಇವರು ಸ್ಥಾಪಿಸಿದ 'ಫ್ರಾಕ್ಟಲ್' ಕಂಪನಿಯು ಭಾರತದ ಪ್ರಮುಖ ಯುನಿಕಾರ್ನ್ ಎಐ ಕಂಪನಿಗಳಲ್ಲಿ ಒಂದಾಗಿದೆ. ಇವರು ಈ ಹಿಂದೆ ನಾಸಕಾಮ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
➤ ನಾಸಕಾಮ್ (NASSCOM) ಎಂಬುದು 1988 ಮಾರ್ಚ್ 1 ರಂದು ಸ್ಥಾಪನೆಯಾದ ಭಾರತೀಯ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಉದ್ಯಮದ ಒಂದು ಪ್ರಮುಖ ಲಾಭರಹಿತ ವ್ಯಾಪಾರ ಸಂಘಟನೆಯಾಗಿದೆ. ನವದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು, ಭಾರತದ ಸಾಫ್ಟ್‌ವೇರ್ ಮತ್ತು ಸೇವಾ ವಲಯದ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತೀಯ ಐಟಿ ಕಂಪನಿಗಳನ್ನು ಪ್ರತಿನಿಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ನಾಸಕಾಮ್ (NASSCOM) ನೂತನ ಅಧ್ಯಕ್ಷರಾಗಿ ಎಐ ತಜ್ಞ ಶ್ರೀಕಾಂತ್ ವೇಲಮಕಣ್ಣಿ ನೇಮಕ
Published by Akshata Halli
24 ಏಪ್ರಿಲ್ 2026