➤ NABARD ನ ಅಂಗಸಂಸ್ಥೆಯಾದ NABKISAN Finance Limited, ಭಾರತದಲ್ಲೇ ಮೊದಲ ಬಾರಿಗೆ ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ (WASH - Water, Sanitation, and Hygiene) ಕ್ಷೇತ್ರಕ್ಕೆ ಮೀಸಲಾದ 'ಸಾಮಾಜಿಕ ಬಾಂಡ್' (Social Bond) ಅನ್ನು ನ್ಯಾಷನಲ್ ಸ್ಟಾಕ್ ಎಕ್ಸ್‌‌ಚೇಂಜ್ (NSE) ನಲ್ಲಿ ಯಶಸ್ವಿಯಾಗಿ ಪಟ್ಟಿ ಮಾಡಿದೆ.
- ಒಟ್ಟು ಸಂಗ್ರಹಿಸಿದ ಮೊತ್ತ: ₹180 ಕೋಟಿ
- ಬಾಂಡ್‌ನ ಅವಧಿ (Tenure): 5 ವರ್ಷಗಳು (ಪರಿಪಕ್ವತೆ ದಿನಾಂಕ: ಸೆಪ್ಟೆಂಬರ್ 2031)
- ಕೂಪನ್ ದರ (ಬಡ್ಡಿ ದರ): ವರ್ಷಕ್ಕೆ 8.10%
- ಸಬ್‌ಸ್ಕ್ರಿಪ್ಶನ್ ಬೆಂಬಲ: ನಿರೀಕ್ಷಿತ ಮೊತ್ತಕ್ಕಿಂತ 1.8 ಪಟ್ಟು (1.8x) ಹೆಚ್ಚು ಬಿಡ್‌ಗಳನ್ನು ಪಡೆದುಕೊಂಡಿದೆ.
- ಸ್ಟಾಕ್ ಎಕ್ಸ್‌ಚೇಂಜ್: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE)
- ತಾಂತ್ರಿಕ ಮತ್ತು ಜ್ಞಾನದ ಪಾಲುದಾರರು (Knowledge Partner): Water.org
- ಕ್ರೆಡಿಟ್ ರೇಟಿಂಗ್ಸ್ (Credit Ratings):
CRISIL AAA (Stable)
CARE AAA (Stable)
(ಇದು ಹಣಕಾಸಿನ ಮರುಪಾವತಿಯಲ್ಲಿ ಅತ್ಯುನ್ನತ ಸುರಕ್ಷತೆಯನ್ನು ಸೂಚಿಸುತ್ತದೆ).
➤ WASH :
W – Water (ಸುರಕ್ಷಿತ ಕುಡಿಯುವ ನೀರು)
S – Sanitation (ನೈರ್ಮಲ್ಯ ವ್ಯವಸ್ಥೆ ಮತ್ತು ಶೌಚಾಲಯ ನಿರ್ಮಾಣ)
H – Hygiene (ಸ್ವಚ್ಛತೆ ಮತ್ತು ಆರೋಗ್ಯಕರ ಅಭ್ಯಾಸಗಳು)
ಬಳಕೆಯ ಉದ್ದೇಶ: ಈ ಬಾಂಡ್‌ನಿಂದ ಬಂದ 180 ಕೋಟಿ ರೂಪಾಯಿಗಳನ್ನು ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ಸೂಕ್ತ ನೈರ್ಮಲ್ಯ ಮತ್ತು ಸ್ವಚ್ಛತೆಯ ಮೂಲಸೌಕರ್ಯಗಳನ್ನು ಒದಗಿಸುವ ಯೋಜನೆಗಳಿಗೆ ಬಳಸಲಾಗುತ್ತದೆ.
➤ NABKISAN Finance Limited :
- NABKISAN ಸಂಸ್ಥೆಯು NABARD (National Bank for Agriculture and Rural Development) ನ ಪ್ರಮುಖ ಅಂಗಸಂಸ್ಥೆಯಾಗಿದೆ.
- ಇದು ಕೃಷಿ, ಗ್ರಾಮೀಣಾಭಿವೃದ್ಧಿ, MSME ಹಾಗೂ ಸ್ವಸಹಾಯ ಗುಂಪುಗಳಿಗೆ (SHGs) ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (FPOs) ಆರ್ಥಿಕ ನೆರವು ನೀಡುತ್ತದೆ.
- NABARD ಅಧ್ಯಕ್ಷರು: ಶಾಸಿ ಕೃಷ್ಣನ್ ವಿ (Shaji Krishnan V)
- NABKISAN MD & CEO: ಇಮ್ಮಾನುವೆಲ್ ಗಣೇಶನ್ (Immanuvel Ganesan)