* ಮುಂಬೈನ ಬೈಕುಲ್ಲಾ ಕಾರಾಗೃಹದಲ್ಲಿ ಕೈದಿಗಳಿಗಾಗಿ ಎಫ್‌ಎಂ ರೇಡಿಯೋ ಕೇಂದ್ರವನ್ನು ಆರಂಭಿಸಲಾಗಿದೆ.
* ಬೈಕುಲ್ಲಾ ಕಾರ್ಯಗೃಹದ ಆವರಣದಲ್ಲಿ ಸ್ಥಾಪಿಸಲಾದ ಎಫ್‌ಎಂ ರೇಡಿಯೊ ಕೇಂದ್ರ ಉದ್ಘಾಟನೆಯ ನಂತರ ಡಿಸೆಂಬರ್ 22 ರಂದು ಕೈದಿ ಶ್ರದ್ಧಾ ಚೌಗುಲೆ ಗುಪ್ತಾ ಅವರನ್ನು ಸಂದರ್ಶಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
* ಈ ಉಪಕ್ರಮವು ಕೈದಿಗಳಿಗೆ ಮನರಂಜನೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಅವರಲ್ಲಿ ಕೆಲವರಿಗೆ ರೇಡಿಯೋ ಪ್ರಸಾರದ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಭಕ್ತಿ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಮಹಾರಾಷ್ಟ್ರದ ಜೈಲು ಇಲಾಖೆ ಮುಖ್ಯಸ್ಥ ಅಮಿತಾಬ್ ಗುಪ್ತಾ ಅವರು ತಿಳಿಸಿದ್ದಾರೆ.
* ಜೈಲಿನೊಳಗೆ ಎಫ್‌ಎಂ ರೇಡಿಯೋ ಕೇಂದ್ರದ ಪರಿಕಲ್ಪನೆ ರಾಜ್ಯದಲ್ಲಿ ಹೊಸದೇನಲ್ಲ. ಪುಣೆಯ ಯರವಾಡ ಸೆಂಟ್ರಲ್ ಜೈಲು, ನಾಗ್ಪುರ ಸೆಂಟ್ರಲ್ ಜೈಲು, ಅಮರಾವತಿ ಸೆಂಟ್ರಲ್ ಜೈಲು ಮತ್ತು ಕೊಲ್ಹಾಪುರ ಸೆಂಟ್ರಲ್ ಜೈಲುಗಳಲ್ಲಿ ಇಂತಹ ಸೌಲಭ್ಯಗಳು ಈಗಾಗಲೇ ಅಸ್ತಿತ್ವದಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಇದು ಮಹಿಳಾ ಕೈದಿಗಳಿಗೆ ಮೊದಲನೆಯದಾಗಿದೆ.
* ಈ FM ರೇಡಿಯೋ ಕೇಂದ್ರದ ಮೂಲಕ ಭಕ್ತಿಗೀತೆಗಳು, ಭಜನೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಬೇಡಿಕೆಯ ಮೇರೆಗೆ ಹಾಡುಗಳನ್ನು ಸಹ ಪ್ಲೇ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದರು.
ಮಂಗಳವಾರ, 26 ಡಿಸೆಂಬರ್ 2023
10:20 ಪೂರ್ವಾಹ್ನ
Daily PDF
ಮುಂಬೈ : ಬೈಕುಲ್ಲಾ ಕಾರ್ಯಗೃಹದಲ್ಲಿ ಮಹಿಳಾ ಕೈದಿಗಳಿಗೆ ಎಫ್ ಎಂ ರೇಡಿಯೋ ಕೇಂದ್ರ ಪ್ರಾರಂಭ
Authored by:
Bhagya R K