* ಮೌರ್ಯ ಸಾಮ್ರಾಟ್ ಅಶೋಕನನ್ನು ದೇವಾನಾಂಪ್ರಿಯ ಎಂದು ಜಗತ್ತಿಗೆ ಪರಿಚಯಿಸಿದ ಮಸ್ಕಿ ಪಟ್ಟಣದ ಪ್ರಸಿದ್ದವಾದ ಅಶೋಕ ಶಿಲಾಶಾಸನದ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
* ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಲ್ಲಿಸಿದ ಪ್ರವಾಸಿ ತಾಣಗಳ ಅಭಿವೃದ್ಧಿ ಪಟ್ಟಿಗೆ ಸಂಪುಟ ಒಪ್ಪಿಗೆ ನೀಡಿದೆ. ಅದರಲ್ಲಿ ಮಸ್ಕಿ ಶಾಸನ ಸ್ಥಳದ ಅಭಿವೃದ್ಧಿಗೆ 10 ಕೋಟಿ ರೂ. ಪ್ರಸ್ತಾವನೆಯೂ ಸೇರಿದೆ.
* ಅಶೋಕನು ಪಾಟಲೀಪುತ್ರ ( ಪಾಟ್ನಾ)ದಿಂದ ತನ್ನ ರಾಜ್ಯವನ್ನು ವಿಸ್ತರಿಸುವ ಸಲುವಾಗಿ ದಂಡಯಾತ್ರೆ ಕೈಕೊಂಡ ಸಂದರ್ಭದಲ್ಲಿ ಮಸ್ಕಿ ಆತನ ವಿಶ್ರಾಂತಿ ಸ್ಥಳವಾಗಿತ್ತು ಎಂದು ಇತಿಹಾಸ ಪುಟಗಳಲ್ಲಿ ಉಲ್ಲೇಖವಾಗಿದೆ.
* 1915ರಲ್ಲಿ ಪಟ್ಟಣದಿಂದ 2 ಕಿ.ಮೀ ದೂರದಲ್ಲಿನ ಬೆಟ್ಟದಲ್ಲಿ ಈ ಶಾಸನವನ್ನು ಸಂಶೋಧಕ ಬೀಡನ್ ಎಂಬುವರು ಪತ್ತೆ ಹಚ್ಚಿದ್ದರು. ಬ್ರಾಹ್ಮಲಿಪಿಯಲ್ಲಿರುವ ಈ ಶಾಸನವು ಅಶೋಕನನ್ನು ದೇವನಾಂಪ್ರಿಯ ಅಶೋಕ ಎಂದು ಗುರುತಿಸಿದ ಶಾಸನವಾಗಿದೆ. ಇದರಿಂದ ಶಾಸನ ಮಹತ್ವಗೊಂಡಿದೆ. ಈ ಶಾಸನಕ್ಕೆ 109 ವರ್ಷ ಪೂರ್ಣಗೊಂಡಿದೆ.
ಶುಕ್ರವಾರ, 20 ಸೆಪ್ಟೆಂಬರ್ 2024
12:36 ಅಪರಾಹ್ನ
Daily PDF
ಮಸ್ಕಿ: ಸಾಮ್ರಾಟ್ ಅಶೋಕ ಶಾಸನ ಸ್ಥಳ ಅಭಿವೃದ್ಧಿಗೆ ನಿರ್ಧಾರ
Authored by:
Jyoti Angadi