* ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
* ಆರ್ ಸ್ಮರಣ್ ​ನಾಯಕತ್ವದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 358 ರನ್ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 358 ರನ್‌ಗಳಿಗೆ ಆಲೌಟ್ ಆಯಿತು. ಮೊದಲನೇ ಇನ್ನಿಂಗ್ಸ್ ಆಡಿದ ಉತ್ತರಪ್ರದೇಶ 139 ರನ್‌ಗಳಿಗೆ ಆಲೌಟ್ ಆಯಿತು. 219 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬರೋಬ್ಬರಿ 585 ರನ್‌ಗಳನ್ನು ಕಲೆಹಾಕಿತು. ಈ ಮೂಲಕ ಕರ್ನಾಟಕ 804 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿತು.
* ಗೆಲುವಿಗೆ 804 ರನ್‌ಗಳ ಬೃಹತ್ ಗುರಿ ಪಡೆದಿದ್ದ ಉತ್ತರ ಪ್ರದೇಶ ತಂಡ ಅಂತಿಮ ದಿನ 6 ವಿಕೆಟ್ ಕಳೆದುಕೊಂಡು ಕೇವಲ 174 ರನ್ ಕಲೆಹಾಕಲಷ್ಟೇ ಶಕ್ತವಾಯಿತು. 
* ಬಿಸಿಸಿಐ ನಡೆಸುವ ದೇಶದ ಪ್ರಮುಖ 23 ವಯೋಮಿತಿ ಟೂರ್ನಿಯನ್ನು 2007-08ರ ಋತುವಿನಿಂದ ಸಿಕೆ ನಾಯ್ಡು 23 ವಯೋಮಿತಿ ಕ್ರಿಕೆಟ್‌ ಟೂರ್ನಿ ಎನ್ನುವ ಹೆಸರಿನಲ್ಲಿ ಆಡಿಸಲಾಗುತ್ತದೆ.
*  ಕರ್ನಾಟಕ 99.5 ಓವರ್‌ಗಳಲ್ಲಿ 358. ಉತ್ತರಪ್ರದೇಶ 46.2 ಓವರ್‌ಗಳಲ್ಲಿ 139. ಎರಡನೇ ಇನಿಂಗ್ಸ್ ಕರ್ನಾಟಕ 151.5 ಓವರ್ ಗಳಲ್ಲಿ 585 (ಕೆ ವಿ ಅನಿಶ್ 214, ಕೃತಿಕ್ ಕೃಷ್ಣಾ 86 ರನ್, ವಿಪ್ರಾಜ್ ನಿಗಮ್ 193 ಕ್ಕೆ 2 ರನ್, ಕುನಲ್ ತ್ಯಾಗಿ 90 ಕ್ಕೆ 4 ರನ್) ಉತ್ತರಪ್ರದೇಶ 31 ಓವರ್ ಗಳಲ್ಲಿ 6 ವಿಕೆಟ್ ಗಳಿಗೆ 174 (ಸ್ವಸ್ತಿಕ್ 67 , ವಿಪ್ರಾಜ್ ನಿಗಮ್ 73 , ಎಲ್. ಮನ್ವಂತ್ ಕುಮಾರ 36 ಕ್ಕೆ 5 ವಿಕೆಟ್ ಗಳಿಸಿದ್ದರು.)