➤ ಭಾರತದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಈ ಐತಿಹಾಸಿಕ ದೇವಾಲಯದ ಪುನಸ್ಥಾಪನೆ (Restoration) ಮತ್ತು ಸಂರಕ್ಷಣೆ (Conservation) ಯೋಜನೆಯನ್ನು ಉಭಯ ನಾಯಕರು ಜಂಟಿಯಾಗಿ ಉದ್ಘಾಟಿಸಿದರು. ಇದಕ್ಕಾಗಿ ಎರಡೂ ದೇಶಗಳು ಒಂದು ದಿನ ಮುಂಚಿತವಾಗಿಯೇ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡಿದ್ದವು.
➤ ಪ್ರಂಬನನ್ ದೇವಾಲಯದ ಇತಿಹಾಸ:
- ತ್ರಿಮೂರ್ತಿಗಳಿಗೆ ಮುಡಿಪಾದ ತಾಣ: ಹತ್ತನೇ (10ನೇ) ಶತಮಾನದಲ್ಲಿ ನಿರ್ಮಾಣವಾದ ಪ್ರಂಬನನ್ ದೇವಸ್ಥಾನ ಸಂಕೀರ್ಣವು ಹಿಂದೂ ಧರ್ಮದ ಪ್ರಮುಖ ದೇವತೆಗಳಾದ ಶಿವ, ವಿಷ್ಣು ಮತ್ತು ಬ್ರಹ್ಮ (ತ್ರಿಮೂರ್ತಿಗಳು) ದೇವರಿಗೆ ಮುಡಿಪಾಗಿದೆ.
- ಇಂಡೋನೇಷ್ಯಾದ ಅತಿ ದೊಡ್ಡ ಹಿಂದೂ ದೇವಾಲಯ: ಇದು ಇಂಡೋನೇಷ್ಯಾ ದೇಶದ ಅತ್ಯಂತ ದೊಡ್ಡ ಹಾಗೂ ಆಗ್ನೇಯ ಏಷ್ಯಾದಲ್ಲೇ ಅತಿ ದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.
- ಯುನೆಸ್ಕೋ ವಿಶ್ವ ಪರಂಪರೆಯ ತಾಣ: ಇದರ ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪರಿಗಣಿಸಿ 1991 ರಲ್ಲಿ ಯುನೆಸ್ಕೋ (UNESCO) ಇದನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
- ಭವ್ಯ ವಾಸ್ತುಶಿಲ್ಪ: ಇಲ್ಲಿನ ಮುಖ್ಯ ಗೋಪುರಗಳು ಎತ್ತರವಾಗಿದ್ದು, ಭಾರತೀಯ ವಾಸ್ತುಶಿಲ್ಪದ ಶೈಲಿಯನ್ನು ಹೋಲುತ್ತವೆ. ರಾಮಾಯಣ ಮತ್ತು ಭಾಗವತ ಪುರಾಣದ ಕಥೆಗಳನ್ನು ಬಿಂಬಿಸುವ ಅದ್ಭುತ ಕೆತ್ತನೆಗಳು ಈ ದೇವಾಲಯದ ಗೋಡೆಗಳ ಮೇಲಿವೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ