* ಕನ್ನಡ ಸಾಹಿತ್ಯ ಪರಿಷತ್ತಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಗೆ ಲೇಖಕಿ ಎಲ್. ಗಿರಿಜಾ ರಾಜ್ ಆಯ್ಕೆಯಾಗಿದ್ದಾರೆ.
* ಈ ಪ್ರಶಸ್ತಿಯಲ್ಲಿ ₹10,000 ನಗದು ನೀಡಲಾಗುತ್ತದೆ. ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗೌರವಿಸಲು ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ಈ ದತ್ತಿಯನ್ನು ಸ್ಥಾಪಿಸಿದೆ.
* 2025ನೇ ಸಾಲಿನ ಪ್ರಶಸ್ತಿ ವಿಜೇತರಾದ ಗಿರಿಜಾ ರಾಜ್ ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಇದುವರೆಗೂ 16 ಕೃತಿಗಳನ್ನು ಪ್ರಕಟಿಸಿದ್ದಾರೆ.
* ಕವಯಿತ್ರಿ, ಪ್ರಬಂಧಗಾರ್ತಿ ಗಿರಿಜಾ ರಾಜ್. ಎಲ್ ಅವರು 1957 ಮಾರ್ಚ್ 06 ರಂದು ಚಿತ್ರದುರ್ಗದಲ್ಲಿ ಜನಿಸಿದರು.
* ಕನ್ನಡದಲ್ಲಿ ಸ್ನಾತಕ್ಕೋತ್ತರ ಪಡೆದಿರುವ ಇವರು ಅಮೃತ ಚೇತನಾ, ಚಿನ್ಮಯಿ, ಪ್ರಿಯಬಾಂಧವಿ, ಪ್ರಣತಿ ಮುಂತಾದ ಕವನ ಸಂಕಲನಗಳನ್ನು ಹೊರತಂದಿದ್ದಾರೆ.
* ಹಾಸ್ಯ ಚಂದನ ಇವರ ಹಾಸ್ಯ ಲೇಖನಗಳ ಸಂಗ್ರವಾಗಿದ್ದು ಉತ್ಥಾನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ನಾಲ್ಕು ಬಾರಿ, ಲೇಖನ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ. ಇವರ ಹಲವಾರು ಲೇಖನಗಳು ಕನ್ನಡದ ಬಹುತೇಕ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಗೆ ಎಲ್. ಗಿರಿಜಾ ರಾಜ್ ಆಯ್ಕೆ
Published by Jyoti Angadi
12 ಸೆಪ್ಟೆಂಬರ್ 2025